ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಗ್ವಾದ ಹಾಗೂ ಪೋಸ್ಟರ್ ವಾರ್ ಕಂಟಿನ್ಯೂ ಆಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ವಿರುದ್ದ HDK ಪದೇ ಪದೇ ಆರೋಪ ಮಾಡ್ತಿರೋ ಬೆನ್ನಲ್ಲೇ ಡಿಕೆಶಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಇದೀಗ ʻಪೆನ್ ಡ್ರೈವ್ ಬ್ರದರ್ಸ್ʼ ಅನ್ನೊ ಕಾಲ್ಪನಿಕ ಸಿನೆಮಾದ ಪೋಸ್ಟರ್‌ಗಳನ್ನ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಗೋಡೆಗಳಿಗೆ ಅಂಟಿಸಿದ್ದಾರೆ. ಈ ಪೋಸ್ಟರ್ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಹಿತಿ ಬಂದ ಕೂಡಲೇ ಪೊಲೀಸರು ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಜೆಡಿಎಸ್ ಕಚೇರಿ ಸುತ್ತಮುತ್ತ ಗಸ್ತು ತಿರುಗಲಾಗ್ತಿದೆ.
ಅಂದ್ಹಾಗೆ ಮೊನ್ನೆಯಷ್ಟೇ ಕುಮಾರಸ್ವಾಮಿ “ನನ್ನ ವಿರುದ್ಧ ಪೋಸ್ಟರ್ ಅಭಿಯಾನ ಮಾಡುತ್ತಿರೋರ ಹಿಂದೆ ಇರೋರು ಟೆಂಟ್‌ಗಳಲ್ಲಿ ಅಡಲ್ಟ್ ಸಿನಿಮಾಗಳನ್ನ ಜನರಿಗೆ ತೋರಿಸಿಕೊಂಡು ಬಂದೋರು. ಅವರಿಂದ್ಲೇ ಇಂಥ ಅಭಿಯಾನ ನಡೀತಿದೆ. ಪೋಸ್ಟರ್ ಅಂಟಿಸಿದ್ರೆ ಅಂಟಿಸಿಕೊಳ್ಳಲಿ. ಯಾರು ಬೇಡ ಅಂತಾರೆ?
ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡೋದು ನಾನೊಬ್ಬನೆ” ಅಂದಿದ್ರು. ಇದ್ರಿಂದ ಡಿಕೆಶಿ ಅಭಿಮಾನಿಗಳು ಇನ್ನಷ್ಟು ಕೆರಳಿದ್ದಾರೆ. ಟೀಸರ್ಗೆ ಇಷ್ಟೊಂದು ಟೆನ್ಶನ್ ಆದ್ರೆ ಹೇಗೆ? ಸಿನಿಮಾ ಇನ್ನೂ ಬಾಕಿಯಿದೆ ಅಂತ ಬರೆಯಲಾಗಿರೋ ಪೋಸ್ಟರ್‌ಗಳನ್ನ ಅಂಟಿಸಿದ್ದಾರೆ. ಇತ್ತ ಎಚ್‌ಡಿಕೆ ಅಡಲ್ಟ್ ಸಿನೆಮಾ ಕಮೆಂಟ್‌ಗೆ ರಿಪ್ಲೈ ಮಾಡಿರೊ ಡಿಸಿಎಂ ಡಿಕೆ ಶಿವಕುಮಾರ್, ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೀತೇನೆ ಅಂತ ಸ್ಟೇಟ್‌ಮೆಂಟ್ ನೀಡಿದ್ದಾರೆ.