ಗದಗ : ಅಡವಿಸೋಮಾಪೂರ – ಕಳಸಾಪುರ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ, ದುರಸ್ತಿ ಮಾಡಿಸಬೇಕು ಅಡವಿಸೋಮಾಪೂರ ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.
ರಸ್ತೆಯ ಮಧ್ಯದಲ್ಲಿ ಭಾರಿ ಗಾತ್ರದ ಗುಂಡಿಗಳಾಗಿದ್ದು, ರಸ್ತೆಕ್ಕೆ ಅಡ್ಡಲಾಗಿ ಮುಳ್ಳು ಕಂಟಿಗಳು ಜಲ್ಲಿಕಲ್ಲುಗಳು ರಸ್ತೆಯಲ್ಲಿ ಹರಡಿವೆ.
ನಿತ್ಯವೂ ಸಾರ್ವಜನಿಕರ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಅವರಿಗೆ ರಸ್ತೆ ಮಾಡಿಸುವಂತೆ ಗ್ರಾಮಸ್ಥರು ಹಲವು ಭಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಲೋಕೊಪಯೋಗಿ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಿ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.