Sunday, December 10, 2023
Google search engine
HomeUncategorizedತವರಿನಲ್ಲೇ ಭಾರತದ ಕೋಟಿ ಕೋಟಿ ಕನಸು‌ ನುಚ್ಚುನೂರು: ಬ್ಯಾಟಿಂಗ್, ಬೌಲಿಂಗ್ ನಲ್ಲಿ ಎಡವಿ ಬಿದ್ದ ಟೀಮ್...

ತವರಿನಲ್ಲೇ ಭಾರತದ ಕೋಟಿ ಕೋಟಿ ಕನಸು‌ ನುಚ್ಚುನೂರು: ಬ್ಯಾಟಿಂಗ್, ಬೌಲಿಂಗ್ ನಲ್ಲಿ ಎಡವಿ ಬಿದ್ದ ಟೀಮ್ ಇಂಡಿಯಾ: ‘ಫೈನಲ್‌ ನಲ್ಲಿ ವಿಶ್ವಕಪ್ ಗೆದ್ದು ರಾಜ’ನಾಗಿ‌ ಮೆರೆದ ಆಸ್ಟ್ರೇಲಿಯಾ

  1. ತವರಿನಲ್ಲೇ ಭಾರತದ ಕೋಟಿ ಕೋಟಿ ಕನಸು‌ ನುಚ್ಚುನೂರು: ಬ್ಯಾಟಿಂಗ್, ಬೌಲಿಂಗ್ ನಲ್ಲಿ ಎಡವಿ ಬಿದ್ದ ಟೀಮ್ ಇಂಡಿಯಾ: ‘ಫೈನಲ್‌ ನಲ್ಲಿ ವಿಶ್ವಕಪ್ ಗೆದ್ದು ರಾಜ’ನಾಗಿ‌ ಮೆರೆದ ಆಸ್ಟ್ರೇಲಿಯಾ

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 6 ವಿಕೆಟ್ ಗಳಿಂದ ಜಯ ಗಳಿಸಿ ವಿಶ್ವಕಪನ್ನು ಗೆದ್ದುಕೊಂಡಿದೆ.

ಟ್ರಾವಿಸ್ ಹೆಡ್ (137 ರನ್) ಹಾಗೂ ಮರ್ನುಸ್ (58 ರನ್) ಅವರ ಅದ್ಭುತ ಜತೆಯಾಟದಿಂದ ಭಾರತ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದಿತು. ಡೇವಿಡ್ ವಾರ್ನರ್ 7 ರನ್, ಮಾರ್ಶ್ 15 ರನ್, ಸ್ಮಿತ್ 4 ರನ್, ಮ್ಯಾಕ್ಸ್ ವೆಲ್ 2 ರನ್ ಗಳಿಸಿದರು. ಭಾರತದ ಪರ ಬೂಮ್ರಾ 2 ವಿಕೆಟ್, ಶಮಿ 1 ವಿಕೆಟ್ ಗಳಿಸಿದರು.

 

ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 240 ರನ್ ಗಳಿಗೆ ಆಲೌಟ್ ಆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆರಂಭ ಉತ್ತವಾಗಿತ್ತು. ಆದರೆ ತದ್ನಂತರ ಬ್ಯಾಕ್ ಟು ಬ್ಯಾಕ್ ವಿಕೆಟ್ ಬಿದ್ದಿದ್ದರಿಂದ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಸರೆಯಾದರು.

ಈ ಇಬ್ಬರು ಆಟಗಾರರು ಅರ್ಧ ಶತಕ ಸಿಡಿಸಿ ಔಟಾದರು.

ಭಾರತ ಪರ ರೋಹಿತ್ ಶರ್ಮಾ 47 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 4 ರನ್ ಗಳಿಗೆ ಔಟಾದರು. ಇನ್ನು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ವಿರಾಟ್ ಕೊಹ್ಲಿ 54 ರನ್ ಸಿಡಿಸಿ ಔಟಾದರೆ ಕೆಎಲ್ ರಾಹುಲ್ 66 ರನ್ ಗೆ ಔಟಾದರು. ಬಳಿಕ ಬಂದ ರವೀಂದ್ರ ಜಡೇಜಾ 9 ರನ್ ಬಾರಿಸಿ ಹೆಜಲ್ವುಡ್ ಎಸೆತದಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

 

ನಂತರ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಔಟಾದರೆ, ಶಮಿ 6, ಜಸ್ ಪ್ರೀತ್ ಬುಮ್ರಾ 1 ಮತ್ತು ಕುಲದೀಪ್ ಯಾದವ್ 10 ರನ್ ಗಳಿಸಿ ಔಟಾದರು. ಇನ್ನು ಮೊಹಮ್ಮದ್ ಸಿರಾಜ್ 9 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ ಮತ್ತು ಹೆಜಲ್ವುಡ್ ತಲಾ 2 ವಿಕೆಟ್, ಗ್ಲೇನ್ ಮ್ಯಾಕ್ಸ್ ವೇಲ್ ಮತ್ತ ಜಂಪಾ ತಲಾ 1 ವಿಕೆಟ್ ಪಡೆದರು.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments