Thursday, March 28, 2024
Google search engine
Homeಶಿಕ್ಷಣಉದ್ಯೋಗಗದಗ : ಬೆಟಗೇರಿ ಯುವತಿ ನಾಪತ್ತೆ ಪ್ರಕರಣ ದಾಖಲು

ಗದಗ : ಬೆಟಗೇರಿ ಯುವತಿ ನಾಪತ್ತೆ ಪ್ರಕರಣ ದಾಖಲು

ಗದಗ : ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರ ಕಣವಿ ಪ್ಲಾಟ್ ಯುವತಿ ಕಾವ್ಯ ಪ್ರಕಾಶ ಬಂಡಾನವರ 2024)ರ ಜ.20 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಬೆಟಗೇರಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರು ತಿಳಿಸಿದ್ದಾರೆ.

16-01-2024 ರಂದು ಮಧ್ಯಾಹ್ನ : 12-00 ಗಂಟೆಯ ಸುಮಾರಿಗೆ ಬೆಟಗೇರಿ ಟರ್ನಲ್‌ಪೇಟೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿ ಅವಳಿಗೆ ನಾಷ್ಟಾ ಕೊಟ್ಟು ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ಬೆಟಗೇರಿ ಮಂಜುನಾಥ ನಗರ ಕಣಿವಿ ಪ್ಲಾಟಿನಲ್ಲಿರುವ ತಮ್ಮ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೇ , ಯಾವುದೋ ಕಾರಣಕ್ಕೆ , ಎಲ್ಲಿಗೋ ಹೋಗಿ ಕಾಣಿಯಾಗಿದ್ದಾಳೆ.ಎಂದು ದೂರಿನಲ್ಲಿ ಅವರ ತಂದೆ ಪ್ರಕಾಶ ಬಂಡಾನವರ  ದೂರು ನೀಡಿದ್ದಾರೆ.

ಈ ಕುರಿತು ಬೆಟಗೇರಿ ಪೊಲೀಸ್ ಠಾಣಾ ಗುನ್ನಾ ನಂಬರ್ : 05/2024 ಕಲಂ : ಮಹಿಳೆ ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಕಾಣೆಯಾದ ಮಹಿಳೆಯ ಚಹರೆ ಕೆಳಗಿನಂತೆ ಇರುತ್ತದೆ .
  • ಹೆಸರು : ಕಾವ್ಯಾ ತಂದೆ ಪ್ರಕಾಶ ಬಂಡಾನವರ ,
  • ವಯಸ್ಸು : 19 ವರ್ಷ , ಜಾತಿ : ಹಿಂದೂ ಕುರುವಿನಶೆಟ್ಟಿ , ಉದ್ಯೋಗ : ಮನೆಗೆಲಸ , ಸಾ || ಬೆಟಗೇರಿ , ಮಂಜುನಾಥ ನಗರ , ಕಣಿವಿ ಪ್ಲಾಟ್ .
  • ಎತ್ತರ : 5 ಪೂಟ್ 2 ಇಂಚು .
  •  ಚಹರೆ : ಸಾಧಾರಣವಾದ ಮೈಕಟ್ಟು , ಕೋಲು ಮುಖ , ಕೆಂಪು ಮೈ ಬಣ್ಣ , ನೆಟ್ಟನೆಯ ಮೂಗು , ಕಪ್ಪು ಕಣ್ಣು . ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು , ಏರು ಹಣಿ ಇರುತ್ತದೆ . ಉಡುಪು : ಮನೆಯಿಂದ ಹೋಗುವಾಗ ಬೂದು ಬಣ್ಣದ ಟಾಫ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದಲ್ಲಿ ಕಪ್ಪು ಚುಕ್ಕೆ ಇರುವ ವೇಲ್ ಧರಿಸಿರುತ್ತಾಳೆ .
  • ಭಾಷೆ : ಕನ್ನಡ , ಹಿಂದಿ ಭಾಷೆ ಮಾತನಾಡುತ್ತಾಳೆ .

ಮೇಲ್ಕಂಡ ಚಹರೆಯುಳ್ಳ ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೆಟಗೇರಿ ಪೊಲೀಸ್ ಠಾಣೆಯ ದೂ.08372 – 238300 ಮೊ.948080449ಅಥವಾ ಗದಗ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08372 – 238300 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments