ಗದಗದಲ್ಲಿ ಕೈ ಕೊಟ್ಟ ಮತ ಯಂತ್ರ

ಗದಗ-ಬೆಟಗೇರಿ ಅವಳಿ ಚುನಾವಣೆ ಮತದಾನ ಹಿನ್ನಲೆ, ವಾರ್ಡ್ 15 ರಲ್ಲಿ ಕೈಕೊಟ್ಟ ಮತ ಯಂತ್ರ, 45 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ.ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.೦೬ ರಲ್ಲಿ ಘಟನೆ ನಡೆದಿದೆ. ಮತಗಟ್ಟೆ ನಂಬರ್ 62 ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು, ವಿಷಯ ತಿಳಿದು ಚುನಾವಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿವಿ ಪ್ಯಾಟ್ ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಎಂದು ತಿಳಿದು ಬಂದಿದೆ.

ಡೊಳ್ಳು ಮೇಳದೊಂದಿಗೆ ಆಗಮಿಸಿದ ಅಭ್ಯರ್ಥಿ

ಗದಗ ನಗರದ ಖಾನ್ ತೋಟ ಬಡಾವಣೆಯಲ್ಲಿನ ಮತಗಟ್ಟೆಗೆ ಡೊಳ್ಳು ಮೇಳದೊಂದಿಗೆ ಪಕ್ಷೇತರ ಅಭ್ಯರ್ಥಿ ಆಗಮಿಸಿದ್ದರು. ಮತಗಟ್ಟೆಗೆ ಬೆಂಬಲಿಗರೊಂದಿಗೆ ಆಗಮಿಸಿದ ಅಭ್ಯರ್ಥಿ ಮುತ್ತು ಜಡಿಯನ್ನಯ ಆವರಣದಲ್ಲಿ ಬರದಂತೆ ಪೊಲೀಸರು ತಡೆದಿದ್ದಾರೆ. ಬಳಿಕ ಅಭ್ಯರ್ಥಿಯನ್ನ ತಡೆದು ಮತಗಟ್ಟೆ ಸಿಬ್ಬಂದಿ ಮಾಸ್ಕ್​ ಹಾಕಿಸಿದ್ದಾರೆ.ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *