ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿ ; ವಿಡಿಯೋ ಮಾಡಿ ಸಾವಿಗೆ ಶರಣಾದ ಮಹಿಳೆ !

ಕೋಲಾರ: ಬಂಗಾರಪೇಟೆ ಪಟ್ಟಣದ ಕೂಗಳತೆ ದೂರದ ಅತ್ತಗಿರಿಕೊಪ್ಪ ನಿವಾಸಿ ಲಕ್ಷ್ಮೀದೇವಮ್ಮ ಮೀಟರ್ ಬಡ್ಡಿದಾರರಿಗೆ ಹೆದರಿ ಆತ್ಮಹತ್ಯೆ ಶರಣಾಗಿದ್ದಾರೆ. ಬಡ್ಡಿ ಹಣಕ್ಕಾಗಿ ತೊಂದರೆ ನೀಡುತ್ತಿರುವುದನ್ನು ಸಹಿಸಿಕೊಳ್ಳಲು ಆಗದೆ ಲಕ್ಮೀದೇವಮ್ಮ ಮನೆಯಲ್ಲಿದ್ದಂತಹ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಕಳೆದ ಗುರುವಾರ ಆತ್ಮಹತ್ಯೆ ಯತ್ನ ನಡೆಸಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಹೆಚ್ಚಿ‌ನ ಚಿಕಿತ್ಸೆಗೆಂದ ಲಕ್ಷ್ಮೀದೇವಮ್ಮ ರನ್ನ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆ ಕಾರಣವೇನು?

ಆತ್ಮಹತ್ಯೆಗೆ ಯತ್ನಿಸಿದಕ್ಕೆ ಕಾರಣ ಏನು ಅನ್ನುವುದಾದರೆ, ಹುಲಿಬೆಲೆ ಗ್ರಾಮದ ವೀಣಾ ವೆಂಕಟೇಶ್, ಲಕ್ಷ್ಮೀ, ಅರುಣ್ ಮತ್ತಿತರರ ಬಳಿ ಲಕ್ಷ್ಮೀದೇವಮ್ಮ ಮನೆಯವರಿಗೂ ತಿಳಿಸದೆ ಹಣದ ಲೇವಾದೇವಿ ವ್ಯವಹಾರ ಮಾಡಿದ್ದಾರಂತೆ, ಅದರಲ್ಲೂ ಹತ್ತು ದಿನದ ಬಡ್ಡಿ, ಹದಿನೈದು ದಿನಕ್ಕೆ ಬಡ್ಡಿ ನೀಡುವ ರೀತಿಯಲ್ಲಿ ಲೇವಾದೇವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ, ವ್ಯವಹಾರದ ಮೊದ ಮೊದಲು ಎಲ್ಲವೂ ಸರಿ ಆಗಿಯೇ ಇತ್ತು, ಇತ್ತೀಚಿಗೆ ಬಡ್ಡಿದಾರರಿಂದ ಪಡೆದ ಹಣಕ್ಕೆ ವಾಪಾಸ್ ಬಡ್ಡಿ ಕಟ್ಟಲಾಗದೆ, ಸಮಸ್ಯೆಗಳು ಒಂದೊಂದಾಗಿ ಹೆಚ್ಚಾಗಿದೆ. ಬಡ್ಡಿದಾರರು ಕೊಡುವ ಮಾನಸಿಕ ಹಿಂಸೆ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.1 ಕೋಟಿ 83 ಲಕ್ಷಕ್ಕೆ ತಿಂಗಳಿಗೆ 15 ಲಕ್ಷ ಬಡ್ಡಿಬಂಗಾರಪೇಟೆ ಪಟ್ಟಣದ ಮುನಿಯಮ್ಮ ಬಡಾವಣೆ ನಿವಾಸಿಯಾದ ವೀಣಾ, ಈ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ, ಚೀಟಿ ವ್ಯವಹಾರದಿಂದ ಆರಂಭವಾದ ಲಕ್ಷ್ಮೀದೇವಮ್ಮ ಹಾಗು ವೀಣಾ ಇಬ್ಬರ ವ್ಯವಹಾರ ಸಂಬಂಧ, ಕಡೆಗೆ ಮೀಟರ್ ಬಡ್ಡಿ ದಂದೆ ವರೆಗೂ ಸಾಗಿ ಬಂದಿದೆ. ಲಕ್ಷ್ಮೀದೇವಮ್ಮ ಆತ್ಮಹತ್ಯೆ ಗು ಮುನ್ನ ಬಡ್ಡಿ ಹಣಕ್ಕಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ವೀಡಿಯೋ ಮಾಡಿ ಚನ್ನೈ ನಲ್ಲಿದ್ದ ತನ್ನ ಅಕ್ಕ ಗಾಯತ್ರಿಗೆ ವಿಡಿಯೊ ಮಾಡಿ ಕಳಿಸಿದ್ದಾರೆ. ವಿಡಿಯೊ ನೋಡಿದ್ದ ಅಕ್ಕ ಗಾಯತ್ರಿ ಮನೆಯವರಿಗೆ ಪೋನ್ ಮಾಡಿ ಹೇಳಿದ ಕೂಡಲೇ, ಮನೆ ಮೇಲಿನ ರೂಮ್ ನಲ್ಲಿ ಮಾತ್ರೆಗಳನ್ನು ಸೇವಿಸಿ, ಪ್ರಜ್ಞಾಹೀನ ಸ್ತಿತಿಯಲ್ಲಿದ್ದವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮನೆಯವರಿಗೆ ತಿಳಿಯದೇ ವ್ಯವಹಾರ ಮಾಡಿದ್ದರು

ವಿಡಿಯೋದಲ್ಲಿ ಬಡ್ಡಿದಾರರು ಸುಮಾರು 1 ಕೋಟಿ ಲಕ್ಷದ 83 ಲಕ್ಷ ಹಣ ತಮಗೆ ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ, ವೀಣಾ ವೆಂಕಟೇಶ್, ಲಕ್ಷ್ಮೀ, ಅರುಣ್ ಎನ್ನುವರು ನನಗೆ ಇನ್ನಿಲ್ಲದ ಕಿರುಕುಳ‌ ನೀಡುತ್ತಿದ್ದಾರೆ, ಅಷ್ಟೇ ಅಲ್ಲದೆ ತಿಂಗಳಿಗೆ 15 ಲಕ್ಷ ಬಡ್ಡಿ ಕೇಳುತ್ತಿದ್ದಾರೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾಳೆ. ಇನ್ನೂ ಗಂಡ ವೆಂಕಟೇಶ್, ಮಗಳು ರಕ್ಷಿತಾ ಹಾಗೂ ವಯಸ್ಸಾದ ತಂದೆಗೂ ಗೊತ್ತಿಲ್ಲದೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮೀಟರ್ ಬಡ್ಡಿಗೆ ಸಿಲುಕಿ ಲೇವಾದೇವಿ ಮಾಡಲು ಹೋದ ಲಕ್ಷ್ಮೀ ದೇವಿ ಇಹಲೋಕ ತ್ಯಜಿಸಿದ್ದಾರೆ. ಈ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ವೀಣಾ ವೆಂಕಟೇಶ್, ಅರುಣ್, ಲಕ್ಷ್ಮಿ ಎಂಬ ಮೂವರ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ, ಆದರೆ ಬಡ್ಡಿ ವ್ಯವಹಾರದ ಪ್ರಮುಖ ಆರೋಪಿ ವೀಣಾ ವೆಂಕಟೇಶ್, ಅರುಣ್, ಲಕ್ಷ್ಮೀ ಪರಾರಿಯಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ ಕೋಲಾರದಲ್ಲಿ ಇಂದಿಗೂ ಜೀವಂತವಾಗಿರುವ ಮೀಟರ್ ಬಡ್ಡಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ, ಹಣದ ಲೇವಾದೇವಿಯ ಮೂಲಕ ಸಂಸಾರ ಕಟ್ಟಿಕೊಳ್ಳಲು ಹೊದ ಲಕ್ಷ್ಮೀದೇವಿ ಅವರು ಮುಂದೆ ಶ್ರೀಮಂತರಾಗುವ ಕನಸು ಕಂಡಿದ್ದರು, ಆದರೆ ಅದೇ ಹಣದ ಲೇವಾದೇವಿಯೇ ಮುಳ್ಳಾಗಿ ಜೀವನವನ್ನು ಕಳೆದುಕೊಂಡಿದ್ದು ಮಾತ್ರ ದುರಂತವೇ ಸರಿ.

Leave a Reply

Your email address will not be published. Required fields are marked *