ಮೂರ್ತಿ ಶಿಥಿಲಗೊಂಡರು ತಿರುಗಿ ನೋಡದ ಗದಗ-ಬೆಟಗೇರಿ ನಗರಸಭೆ !

ಗದಗ: ಕುಮಾರವ್ಯಾಸ (ಕ್ರಿ.ಶ. 1350-1400) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬರು, ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಕುಮಾರವ್ಯಾಸರ ಮೂಲ ಹೆಸರು ನಾರಾಯಣಪ್ಪ, ಅದರಲ್ಲೂ “ಗದುಗಿನ ನಾರಾಯಣಪ್ಪ ಎಂದು ಸಾಮಾನ್ಯವಾಗಿ ಗದುಗಿನ ವೀರನಾರಾಯಣನ ಸನ್ನಿಧಿಯಲ್ಲಿ ಕುಮಾರವ್ಯಾಸರ ಹೆಸರನ್ನು ಉಲ್ಲೇಖಿಸಿರುವುದರಿಂದ ಅವರು ಅದಕ್ಕಿಂತ ಹಿಂದಿನವರೆಂದು ಸ್ಪಷ್ಟವಾಗಿದೆ. ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಯಲಿಂಗಲೀಲೆ’ ಬರೆದ ಕುಮಾರವ್ಯಾಸರನ್ನು ಗುರುತಿಸುವುದು ವಿಶೇಷ ಜೊತೆಗೆ ಗದಗ ಜಿಲ್ಲೆಯ ಜನರ ಹೆಮ್ಮೆಯಾಗಿದೆ. ಅಂತಹ ಅತ್ಯುನ್ನತ ಕವಿ ಕುಮಾರವ್ಯಾಸರ ಮೂರ್ತಿಯನ್ನು ಗದಗನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿ ಕಾರಣಕ್ಕೆ ಇಲ್ಲಿನ ವಾಣಿಜ್ಯ ಮಳಿಗೆಗಳಿಗೆ ಕುಮಾರವ್ಯಾಸ ಕಾಂಪ್ಲೆಕ್ಸ್ ಎಂದು ಕರೆಯಲಾಗುತ್ತದೆ. ನಗರದ ಗಾಂಧಿ ಸರ್ಕಲ್ ಹತ್ತಿರ ಕುಮಾರವ್ಯಾಸ ಮೂರ್ತಿ ಪ್ರತಿಷ್ಟಾಪಿಸಲಾಗಿದೆ, ಮೂರ್ತಿ ಪ್ರತಿಷ್ಠಾಪಿಸಿ ಹಲವು ವರ್ಷ ಕಳೆದವೆ ಈಗ ಈ ಮೂರ್ತಿಯ: ಯಾವಾಗ ಬೇಕಾದರೂ ಬಿದ್ದು ಹೋಗಬಹುದು, ಆದರೆ ಬಗ್ಗೆ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ, ಹೀಗಾಗಿ ಈ ವಿಚಾರದಲ್ಲಿ ಗದಗ-ಬೆಟಗೇರಿ ನಗರಸಭೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಈ ಕೂಡಲೇ ನಗರಸಭೆಯ ಅಧಿಕಾರಿಗಳು ಕುಮಾರವ್ಯಾಸ ಮೂರ್ತಿಯ ಬಗ್ಗೆ ಕಾಳಜಿ ವಹಿಸಿ ಗದಗ ನಗರದ ಜನತೆಯ ಆಗ್ರಹವಾಗಿದೆ ಗದಗ ಜಿಲ್ಲೆಯ ಕೀರ್ತಿ ಹೆಚ್ಚಲು ಕುಮಾರವ್ಯಾಸರು ಅಪಾರ ಕೊಡುಗೆ ನೀಡಿದ್ದಾರೆ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಯಣಪ್ಪ, ಕುಮಾರ ವ್ಯಾಸ ವಾಗಿದ್ದಾರೆ. ಈ ಹೆಸರು ಕುಮಾರವ್ಯಾಸರಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ, ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಆಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.ಕುಮಾರವ್ಯಾಸರ ಹೆಸರಿರುವ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. 26-8-1539 ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗ ಪ್ರಸನ್ನನಾದಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವರ ಕಾಲ ಸುಮಾರು 1439 ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ. ಕುಮಾರವ್ಯಾಸರ ಅತಿ ಪ್ರಸಿದ್ಧ ಕೃತಿ ಕರ್ಣಾಟಕ ಭಾರತ ಕಥಾಮಂಜರಿ, ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸರು ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾರೆ.ಇಂತಹ ಶ್ರೇಷ್ಟ ಕವಿಯ ಮೂರ್ತಿ ಪ್ರತಿಷ್ಠಾಪಿಸಿ,

ಇದೀಗ ಅದರ ಸುತ್ತಲಿನ ಕಟ್ಟಡದ ಕಲ್ಲುಗಳು ಕಿತ್ತಿವೆ. ಇದರಿಂದ ಮೂರ್ತಿಗೂ ಧಕ್ಕೆಯಾಗುವ ಸಂಭವವಿದೆ. ಹೀಗಾಗಿ ಕೂಡಲೇ ನಗರಸಭೆಯ ಅಧಿಕಾರಿಗಳು ಈ ಮೂರ್ತಿಯ ಬಗ್ಗೆ ಕಾಳಜಿ ವಹಿಸಿಬೇಕೆಂದು ಗದಗ ನಗರದ ಜನತೆಯ ಆಗ್ರಹವಾಗಿದೆ.

Leave a Reply

Your email address will not be published. Required fields are marked *