ವಚನ ಗಾಯನ ಸಿಂಚನ ಕಾರ್ಯಕ್ರಮ.

ಜ್ಯಾಲವಾಡಗಿ: ಶ್ರೀ ಗುರು ಪುಟ್ಟರಾಜ ಯುವಕ ಸಂಘ ರಿ. ಜ್ಯಾಲವಾಡಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಹಯೋಗದೊಂದಿಗೆ ಇಂದು ಶ್ರೀ ಮಳೆಯೋಗೀಶ್ವರ ಸ್ವಾಮಿಗಳ ಮಠ ಜ್ಯಾಲವಾಡಗಿಯಲ್ಲಿ ವಚನ ಗಾಯನ ಸಿಂಚನ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಶ್ರೀ ಮಲ್ಲಪ್ಪ ಸೋ ಚೂರಿಯವರು ಈಗಿನ ಕಂಪ್ಯೂಟರ್ ಯುಗದಲ್ಲಿ ಸಂಗೀತ ಸಾಹಿತ್ಯ ಕಲೆ ಮರೆಮಾಚುತ್ತಿದೆ ಅಂತಹುದರಲ್ಲಿ ನಮ್ಮ ಕನ್ನಡ ನಾಡಿನ ಸಂಸ್ಕೃತಿ ಮೆರಗು ಇಂತಹ ಸಂಗೀತ ಕಾರ್ಯಕ್ರಮಗಳಿಂದ ಭವ್ಯ ಪರಂಪರೆಯನ್ನು ಬೆಳಗುತ್ತಿದೆ ಎಂದರು ರಾಜ್ಯ ಪ್ರಶಸ್ತಿ ವಿಜೇತ ನಾಟಕ ನಿರ್ದೇಶಕರಾದ ಶ್ರೀ ಮಳ್ಳಪ್ಪ ಮಾಸ್ತರ್ ಗುಡಸಲಮನಿ ಇವರು ಹಾರ್ಮೋನಿಯಂ ನುಡಿಸುವ ಮುಖಾಂತರ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಈರಣ್ಣ ಹಣಜಿ ಉಪಾಧ್ಯಕ್ಷರು ಜ್ಯೋತಿ ಬೆಳಗಿಸಿದರು ಶ್ರೀ ಕೃಷ್ಣಪ್ಪ ಲಾ ಲಮಾಣಿ, ಸದಸ್ಯರು ಗ್ರಾ.ಪಂ. ಫಕ್ಕೀರೇಶ ಹಾ ಮಲ್ಲೂರ ಶ್ರೀ ನಾಗನಗೌಡ ಶಂ. ಪಾಟೀಲ, ಚನ್ನಬಸಪ್ಪ ಗಡ್ಡೇಪ್ಪನವರ, ಮಲ್ಲಿಕಾರ್ಜುನಯ್ಯ ಕಲ್ಮಠ, ಶಂಕ್ರಯ್ಯ ಡಂಬಳಮಠ, ಮಲ್ಲಪ್ಪ ಮಲ್ಲೂರ ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು ಶ್ರೀ ಶಿವಪ್ಪ ಕೊ ವಾಲಿಕಾರ ಮಕ್ತುಂಪುರ ಮತ್ತು ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಶ್ರೀ ವೀರೇಶ ಡಂಬಳಮಠ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಪ್ರಭುಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು

Leave a Reply

Your email address will not be published. Required fields are marked *