ಕಬಡ್ಡಿ 2021 ಮೊದಲ ಪಂದ್ಯವೇ ರಣರೋಚಕ..ಬಲಿಷ್ಠ ಹೋರಾಟ ನಡೆಸಿ ಸೋತ ಬೆಂಗಳೂರು ಬುಲ್ಸ್ !

ಕಬಡ್ಡಿ.. ಕಬಡ್ಡಿ.. ಕಬಡ್ಡಿ.. ಇದನ್ನು ಕೇಳುತ್ತಿದ್ದರೆ ಸಾಕು, ನಾವು ಒಮ್ಮೆ ತೊಡೆ ತಟ್ಟಿ ಎದುರಾಳಿಯ ಹುಟ್ಟಡಗಿಸೋಣ ಎನ್ನುವ ಜೋಶ ಬರುತ್ತೆ. ಅಂತಹ ಜೋಶ್​ ನೀಡುವ ಪ್ರೊ ಕಬಡ್ಡಿ ಹಬ್ಬಕ್ಕೆ ಇಂದು ಚಾಲನೆ ಸಿಕ್ಕಿದೆ. ಹೌದು, ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ.ಪ್ರೋ ಕಬ್ಬಡಿ ಮೊದಲ ಪಂದ್ಯವೇ ಸಾಕಷ್ಟ ರೋಚಕತೆಯಿಂದ ಕೂಡಿತ್ತು. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ಅಂತ್ಯದಲ್ಲಿ ಎಡವಿದ್ದಾರೆ. ಯು ಮುಂಬಾಗೆ ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್​ ಕೊನೆಯ ಹಂತದಲ್ಲಿ ಸ್ಟ್ಯಾಟರ್ಜಿ ಸರಿಯಿಲ್ಲದೇ ಸೋತಿದೆ. ಪವನ್​ಕುಮಾರ್ ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್ ನಲ್ಲಿ ಅವರ ಆಟ ನಡೆಯಲಿಲ್ಲ. ಕೇವಲ ಪಂದ್ಯ ಮುಗಿಯಲು ಕೇವಲ 5 ನಿಮಿಷ ಇರುವಾಗ ಬೆಂಗಳೂರು ಬುಲ್ಸ್​ ತಂಡ ಯು ಮುಂಬಾಗೆ ಹೆಚ್ಚು ಪಾಯಿಂಟ್ಸ್​ ನೀಡಿತು. ಹೀಗಾಗಿ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್​ ತಂಡ ಎಡವಿತು. ಬೆಂಗಳೂರು ಬುಲ್ಸ್ 30 ಅಂಕ​ ಗಳಿಸಿದ್ರೆ, ಯು ಮುಂಬಾ 46 ಅಂಕಗಳಿಸಿ ಗೆದ್ದು ಬೀಗಿದೆ.

Leave a Reply

Your email address will not be published. Required fields are marked *