ವಾರ್ಡ್ ನಂ1 ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ.ಅನಿಲ. ಸಿದ್ದಮ್ಮನಹಳ್ಳಿ ಪರ.ಮಾಜಿ ಶಾಸಕ ಶ್ರೀ ಡಿ.ಆರ್ ಪಾಟೀಲ್ ಮತಯಾಚನೆ.

ಗದಗ: 01ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ .ಅನಿಲ್.ಸಿದ್ದಮನಹಳ್ಳಿ ಅವರು ಆಶ್ರಯ ಕಾಲೋನಿಯಲ್ಲಿ ಈ ಭಾಗದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರು ಶ್ರೀ ಡಿ ಆರ್ ಪಾಟೀಲ್ ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಮಾಡಿದ ಜನಪರ ಯೋಜನೆಗಳು, ಅಭಿವೃದ್ಧಿ ಕಾಮಗರಿಗಳ ಬಗ್ಗೆ ಮಾಹಿತಿ ನೀಡಿ.ಅಭಿವೃದ್ಧಿ ಕೇಲಸಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮೀ.ಅನಿಲ ಸಿದ್ದಮ್ಮನಹಳ್ಳಿ ಕ್ರಮ ಸಂಖ್ಯೆ 02 ಹಸ್ತದ ಗುರುತಿಗೆ ಮತ ನೀಡಬೇಕು ಎಂದು ಮತಯಾಚಿಸಿದರು’ವಾರ್ಡ್ ನಂ.01 ರಲ್ಲಿ ಮೂಲಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆ, ಸ್ವಚ್ಛತೆಗಾಗಿ ಶ್ರಮಿಸಲಾಗುವುದು.ವಾರ್ಡ್‌ನಲ್ಲಿರುವ ಬಡ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು.ರಾಜ್ಯಸರಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಾನು ಲಕ್ಷ್ಮೀ.ಅನಿಲ.ಸಿದ್ದಮನಹಳ್ಳಿ ನನ್ನ ಗುರುತು “ಹಸ್ತದ ಗುರುತಿಗೆ ಮತ ನೀಡಿ ವಾರ್ಡ್‌ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಶ್ರಯ ಕಾಲೋನಿಯ ಸಾರ್ವಜನಿಕರು ಭಾಗವಹಿಸಿದ್ದರು

Leave a Reply

Your email address will not be published. Required fields are marked *