ಸಚಿನ್ ಪಾಟೀಲ್ ಪಕ್ಷೇತರ ಅಭ್ಯರ್ಥಿ ಸುರೇಶ್ ಬೆಳದಡಿ ಪರವಾಗಿ ಮತಯಾಚನೆ

ಗದಗ: 24ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಸುರೇಶ್ ಬೆಳದಡಿ ಅವರು ಮಕಾನಗಲ್ಲಿ ಉಡಚಮ್ಮನ ದೇವಸ್ಥಾನ, ಬನ್ನಿಮಹಾಕಾಳಿ ದೇವಸ್ಥಾನ ಉಡಚ್ಚಮ್ಮ ಓಣಿ , ದತ್ತಾತ್ರೇಯ ರೋಡ , ಮಕಾನ ಗಲ್ಲಿ , ಮೈಕ್ರೋ ಸ್ಟೇಶನ್ , ಮಹಮ್ಮದ ಅಲಿ ಸರ್ಕಲ್ , ನಾಲ್ವಾಡರ ಓಣಿ ಮೆಹಬೂಬಸುಭಾನಿ ದರ್ಗಾದ ಮಾರ್ಗವಾಗಿ ಈ ಭಾಗದಲ್ಲಿ ಸಭೆಯ ಮೂಲಕ ಪ್ರಚಾರ ನಡೆಸಿದರು.ಮಾಜಿ ಶಾಸಕ ಡಿ.ಆರ್ ಪಾಟೀಲ್ ಅವರ ಪುತ್ರ ಸಚ್ಚಿನ್ ಪಾಟೀಲ್ ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಸಚಿನ್ ಪಾಟೀಲ್ ಮಾತನಾಡಿ ಯುವಕರ ಶಕ್ತಿ ತೋರಿಸುವ ಸಂದರ್ಭ ಈ ನಗರಸಭೆ ಚುನಾವಣೆಯಲ್ಲಿ ಬಂದಿದೆ ಪಕ್ಷೇತರ ಅಭ್ಯರ್ಥಿಯಾದ ನನ್ನ ಆತ್ಮೀಯ ಸಹೋದರ ಸುರೇಶ್ ಬೆಳದಡಿ ವಾರ್ಡ್ ನಂ 24 ಇವರ ಗುರುತು ಆಟೋ ರಿಕ್ಷಾಕ್ಕೆ ಮತ ನೀಡಿ ಎಂದು ಮತದಾರರಿಗೆ ಮನವಿ ಮಾಡಿದರು ‘ವಾರ್ಡ್ ನಂ.24 ರಲ್ಲಿ ಮೂಲಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ, ರಸ್ತೆ, ಸ್ವಚ್ಛತೆಗಾಗಿ ಶ್ರಮಿಸಲಾಗುವುದು.ವಾರ್ಡ್‌ನಲ್ಲಿರುವ ಬಡ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಗದಗ-ಬೆಟಗೇರಿ ನಗರಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ನಾನು ಸುರೇಶ್ ಬೆಳದಡಿ ನನ್ನ ಗುರುತು “ಆಟೋ ರಿಕ್ಷಾ”ಗೆ ಮತ ನೀಡಿ ವಾರ್ಡ್‌ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಸುರೇಶ್ ಮತದಾರರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *