ಯಾವುದು ಶಾಶ್ವತವಲ್ಲ … ಸ್ಥಾನಮಾನವೂ ಶಾಶ್ವತವಲ್ಲ … ‘ ಅಚ್ಚರಿ ಮೂಡಿಸಿದ ಸಿಎಂ ಭಾವುಕ ಮಾತು

ಹಾವೇರಿ: ಯಾವುದೂ ಶಾಶ್ವತವಲ್ಲ, ಬದುಕು, ಸ್ಥಾನಮಾನ ಯಾವುದೂ ಕೂಡ ಶಾಶ್ವತವಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕ ಮಾತನಾಡಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.ಸ್ವಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆ ಎಂಬುದು ಗೊತ್ತಿಲ್ಲ. ಸ್ಥಾನಮಾನ, ಬದುಕು ಯಾವುದೂ ಕೂಡ ಶಾಶ್ವತವಲ್ಲ ಎಂದು ಭಾವುಕರಾಗಿ ಮಾತನಾಡಿದ್ದಾರೆ.ಸಿಎಂ ಆದ ಬಳಿಕ ಕ್ಷೇತ್ರದ ಕಡೆ ಗಮನಹರಿಸಲಾಗುತ್ತಿಲ್ಲ. ಸಿಎಂ ಸ್ಥಾನದ ಜತೆಗೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ. ಪ್ರೀತಿ, ವಿಶ್ವಾಸದ ಮುಂದೆ ಅಧಿಕಾರ ಮಹತ್ವದ್ದಲ್ಲ ಎಂದು ಹೇಳಿದ್ದಾರೆ.ಒಟ್ಟಾರೆ ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳ ಭಾವುಕ ಮಾತು ಬದಲಾವಣೆ ಕುರಿತ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡುವಂತಿದೆ.

Leave a Reply

Your email address will not be published. Required fields are marked *