ಗದಗ ಬೆಟಗೇರಿ ನಗರಸಭೆ ಮಿನಿ ಸಮರಕ್ಕೆ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು.

ಗದಗ – ಬೆಟಗೇರಿ ನಗರ ಸಭೆಯ ಸಾರ್ವತ್ರಿಕ ಚುನಾವಣೆ ಜರುಗಿಸಲು ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು , ಚುನಾವಣಾ ಅಧಿಸೂಚನೆಯನ್ನು ಡಿ . 8 ರಂದು ಹೊರಡಿಸಲಾಗಿದೆ . ಡಿಸೆಂಬರ್ 15 ಬುಧವಾರ ನಾಮಪತ್ರಗಳನ್ನು ಸ್ವೀಕರಿಸಲು ಕೊನೆಯ ದಿನವಾದ್ದರಿಂದ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ನಗರಸಭೆಗೆ ಡೊಳ್ಳು ವಾದ್ಯ ಘೋಷಗಳೊಂದಿಗೆ , ಪಟಾಕಿಗಳನ್ನ ಸಿಡಿಸಿ ನಾಮಪತ್ರ ಸಲ್ಲಿಸಿದರು . ಇದೆ ಡಿಸೆಂಬರ್ . 16 ರಂದು ನಾಮಪತ್ರಗಳ ಪರೀಶೀಲನೆ ಜರುಗಲಿದ್ದು , ಡಿಸೆಂಬರ್ . 18 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ಹಾಗೂ ಸಹಾಯಕ ದಿನವಾಗಿರುತ್ತದೆ . ನಂತರ ಅಭ್ಯರ್ಥಿಗಳು ತಮ್ಮ ತಮ್ಮ ವಾರ್ಡಗಳಲ್ಲಿ ಅಬ್ಬರದ ಪ್ರಚಾರಕ್ಕೆ ತೆರಳುವರು ನಂತರ ಡಿಸೆಂಬರ್ . 27 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು , ಡಿಸೆಂಬರ್ . 30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆಯು ನಡೆಯಲಿದ್ದು , ಅಂದೇ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವುದು . ಪ್ರತಿ 5 ರಿಂದ 6 ವಾರ್ಡುಗಳಿಗೊಬ್ಬ ಚುನಾವಣಾಧಿಕಾರಿ ಚುನಾವಣಾಧಿಕಾರಿಯನ್ನು ನೇಮಕ ಮಾಡಲಾಗಿದ್ದು , ಗದಗ – ಬೆಟಗೇರಿ ನಗರ ಸಭೆಯಲ್ಲಿ ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ನಾಮಪತ್ರ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು , ಅದರಂತೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ್ದರಿಂದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ದೃಶ್ಯ ಕಂಡು ಬಂತು.

Leave a Reply

Your email address will not be published. Required fields are marked *