ವಿಧಾನಪರಿಷತ್ ಚುನಾವಣೆ’ಯಲ್ಲಿ ಯಾರು ಗೆಲುವು . ? ಯಾರು ಸೋಲು ಗೊತ್ತಾ . ?

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಂತ 25 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯ ಬಹುತೇಕ ಫಲಿತಾಂಶ ಹೊರ ಬಿದ್ದಿದೆ. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದಾರೆ.ಡಿಸೆಂಬರ್ 10, 2021ರಂದು ನಡೆದಂತ 25 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆಯೂ ಪರಿಷತ್ ಕದನದ ಬಿಗ್ ಪೈಟ್ ಫಲಿತಾಂಶ ಹೊರ ಬಿದ್ದಿದ್ದು, ಚುನಾವಣಾ ಆಯೋಗದಿಂದ ಅಧಿಕೃತವಾಗಿ ಘೋಷಣೆ ಮಾಡೋದು ಮಾತ್ರವೇ ಬಾಕಿ ಇದೆ.ಕುತೂಹಲ ಮೂಡಿಸಿದ್ದಂತ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಡಿ.ಹೆಚ್ ಶಂಕರ್ ಮೂರ್ತಿಯವರ ಪುತ್ರ ಡಿ.ಎಸ್ ಅರುಣ್ ಗೆಲುವು ಸಾಧಿಸಿದ್ದರೇ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಯಾರು ಸೋಲು ಎನ್ನುವ ಬಗ್ಗೆ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಮಂಡ್ಯ ಕ್ಷೇತ್ರ – ದಿನೇಶ್ ಗೂಳಿಗೌಡ ಗೆಲುವುಧಾರವಾಡ – ಗದಗ ಹಾವೇರಿ ಕ್ಷೇತ್ರ – ಸಲೀಂ ಅಹ್ಮದ್ ಗೆಲುವುರಾಯಚೂರು ಕ್ಷೇತ್ರ – ಶರಣಗೌಡ ಪಾಟೀಲ್ ಗೆಲುವುಬೀದರ್ ಕ್ಷೇತ್ರ – ಭೀಮರಾವ್ ಪಾಟೀಲ್ ಗೆಲುವುಬೆಂಗಳೂರು ಗ್ರಾಮಾಂತರ ಕ್ಷೇತ್ರ – ಎಸ್ ರವಿ ಗೆಲುವುಮೈಸೂರು-ಚಾಮರಾಜನಗರ ಕ್ಷೇತ್ರ – ಡಾ.ಡಿ.ತಿಮ್ಮಯ್ಯ ಗೆಲುವುಕೋಲಾರ- ಚಿಕ್ಕಬಳ್ಳಾಪುರ ಕ್ಷೇತ್ರ – ಎಂ ಎಲ್ ಅನೀಲ್ ಕುಮಾರ್ ಗೆಲುವುದಕ್ಷಿಣ ಕನ್ನಡ ಉಡುಪಿ ಕ್ಷೇತ್ರ – ಮಂಜುನಾಥ್ ಬಂಢಾರಿ ಗೆಲುವುತುಮಕೂರು ಕ್ಷೇತ್ರ – ರಾಜೇಂದ್ರ ಗೆಲುವುಕೋಲಾರ – ಚಿಕ್ಕಬಳ್ಳಾಪುರ ಕ್ಷೇತ್ರ – ಎಂ ಎಲ್ ಅನೀಲ್ ಕುಮಾರ್ ಗೆಲುವುವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿದಕ್ಷಿಣ ಕನ್ನಡ – ಉಡುಪಿ ಕ್ಷೇತ್ರದಿಂದ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವುಧಾರವಾಡ ಗದಗ ಹಾವೇರಿ ಕ್ಷೇತ್ರ – ಪ್ರದೀಶ್ ಶೆಟ್ಟರ್ ಗೆಲುವುಕೊಡಗು ಕ್ಷೇತ್ರ – ಸುಜಾ ಕುಶಾಲಪ್ಪ ಗೆಲುವುಬೆಂಗಳೂರು ನಗರ ಕ್ಷೇತ್ರ – ಹೆಚ್ ಎಸ್ ಗೋಪಿನಾಥ ರೆಡ್ಡಿ ಗೆಲುವುಉತ್ತರ ಕನ್ನಡ ಕ್ಷೇತ್ರ – ಗಣಪತಿ ಉಳ್ವೇಕರ್ ಗೆಲುವುಚಿತ್ರದುರ್ಗ – ದಾವಣಗೆರೆ – ಕೆ ಎಸ್ ನವೀನ್ ಗೆಲುವುವಿಜಯಪುರ -ಬಾಗಲಕೋಟೆ ಕ್ಷೇತ್ರ – ಪಿ ಹೆಚ್ ಪೂಜಾರ್ ಗೆಲುವುಚಿಕ್ಕಮಗಳೂರು ಕ್ಷೇತ್ರ – ಎಂ.ಕೆ.ಪ್ರಾಣೇಶ್ಕಲಬುರ್ಗಿ ಕ್ಷೇತ್ರ – ಬಿ.ಜಿ.ಪಾಟೀಲ್ ಗೆಲುವುಬಳ್ಳಾರಿ ಕ್ಷೇತ್ರ – ವೈ ಎಂ ಸತೀಶ್ ಗೆಲುವುಶಿವಮೊಗ್ಗ ಕ್ಷೇತ್ರ – ಡಿಎಸ್ ಅರುಣ್ ಗೆಲುವುಮೈಸೂರು ಕ್ಷೇತ್ರ ಬಾಕಿವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಹಾಸನ ಕ್ಷೇತ್ರ – ಸೂರಜ್ ರೇವಣ್ಣ ಗೆಲುವುಬಳ್ಳಾರಿಯಲ್ಲಿ ಕಾಂಗ್ರೆಸ್ ಕೆ ಸಿ ಕೊಂಡಯ್ಯ ಸೋಲು ಕಂಡಿದ್ದರೇ, ಶಿವಮೊಗ್ಗದಲ್ಲಿ ಹಾಲಿ ಎಂ.ಎಲ್.ಸಿ ಪ್ರಸನ್ನ ಕುಮಾರ್ ಸೋಲು ಕಂಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಅವರು ಸೋಲು ಕಂಡಿದ್ದಾರೆ.

Leave a Reply

Your email address will not be published. Required fields are marked *