ಮುಂಡರಗಿ ಪುರಸಭೆ ಇಲಾಖೆಗೆ ಎಸಿಬಿ ದಾಳಿ

ಗದಗ : ಸಾರ್ವಜನಿಕರ ದೂರಿನ ಮೇರೆಗೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಪುರಸಭೆ ಮೇಲೆ ಎಸಿಬಿ ದಾಳಿ ನಡೆದಿದೆ.ಧಾರವಾಡ ವಿಭಾಗದ ಎಸಿಬಿ ತಂಡ ದಾಳಿ ನಡೆಸಿದ್ದು ಪುರಸಭೆಯಲ್ಲಿ ಮನೆ ಕಟ್ಟಿಸಿಕೊಳ್ಳಲು ಉತಾರಕ್ಕಾಗಿ ವಿಳಂಬ ಹಾಗೂ ಮನೆಯ ಪರವಾನಿಗೆ ಮತ್ತು ಖಾತೆ ಬದಲಾವಣೆ ಕೆಲಸಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಪಡೆಯಲಾಗುತ್ತಿದೆ, ಎಂದು ಸಾರ್ವಜನಿಕರು ಎಸಿಬಿಗೆ ದೂರು‌ ಸಲ್ಲಿಸಿದ್ದರೆನ್ನಲಾಗಿದೆ.

ಈ ಹಿನ್ನಲೆ ಪುರಸಭೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳನ್ನು ಪರೀಶಿಲಿಸಿ ದಾಖಲೆಗಳೊಂದಿಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದ್ದು ದಾಳಿಯಲ್ಲಿ ಒಟ್ಟು ೫೧ ಸಾವಿರ ಹಾಗೂ ಸಾರ್ವಜನಿಕರಿಗೆ ವಿಳಂಬವಾದ ಕಾಗದ ಪತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಎಸಿಬಿ ಎಸ್ಪಿ ಬಿ.ಎಸ್.ಸೋಮನಗೌಡ್ರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಂ.ವಿ.ಮಲ್ಲಾಪೂರ ನೇತೃತ್ವದಲ್ಲಿ ಸಿಪಿಐ ಆರ್.ಎಫ್.ದೇಸಾಯಿ, ಈರಣ್ಣ ಹಳ್ಳಿ, ವಿ.ಎನ್.ಕಡಿ, ಅಲಿಶೇಖ ಹಾಗೂ ಸಿಬ್ಬಂದಿ ವರ್ಗದ ತಂಡ ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *