ವಿಜಯಪುರ ಜಿಲ್ಲೆಯ ಕರ್ತವ್ಯನಿರತ ಯೋಧ ಆತ್ಮಹತ್ಯೆಗೆ ಶರಣು ,

ವಿಜಯಪುರ: ದೆಹಲಿಯಲ್ಲಿ ಯೋಧರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇನಾ ಕ್ಯಾಂಪ್​ನಲ್ಲಿ ಕರ್ತವ್ಯದಲ್ಲಿದ್ದ ಮಂಜುನಾಥ್ ಹೂಗಾರ್ ನೇಣಿಗೆ ಶರಣಾದವರು. ಅವರಿಗೆ 22 ವರ್ಷ ವಯಸ್ಸಾಗಿತ್ತು. ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಮಂಜುನಾಥ್ ಒಂದೂವರೆ ತಿಂಗಳ ಹಿಂದೆ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆತ್ಮಹತ್ಯೆ ಬಗ್ಗೆ ಸೇನಾ ಅಧಿಕಾರಿಗಳಿಂದ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಮಂಜುನಾಥ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಸದ್ಯ ದೆಹಲಿಯಲ್ಲಿ ಮೃತ ದೇಹವಿದ್ದು, ಮಂಗಳವಾರ ದಿನಾಂಕ 07 ರಂದು ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮಂಜುನಾಥ್ ಸಾವಿನಿಂದ ಕುಟುಂಬದವರ ಜೊತೆಗೆ ಊರಿನ ಜನರಲ್ಲಿ ಶೋಕ ಮನೆಮಾಡಿದೆ.

Leave a Reply

Your email address will not be published. Required fields are marked *