ಶಿಕ್ಷಕ ವರ್ಗಾವಣೆ, ಉಪವಾಸ ಜೊತೆಗೆ ಕಂಬನಿ ಮಿಡಿದ ಮಕ್ಕಳು”

ಗದಗ : ಈಗಾಗಲೇ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳು ಪ್ರಾರಂಭಗೊಂಡು ಪ್ರಗತಿ ಹಂತದಲ್ಲಿವೆ. ಆದರೆ ವರ್ಗಾವಣಾ ಪ್ರಕ್ರಿಯೆಯಲ್ಲಿ ಕೊಂಚಿಗೇರಿ ಗ್ರಾಮದ ಶಾಲಾ ಶಿಕ್ಷಕರಾದ .ಷಣ್ಮುಖ ಭೀಮಪ್ಪ ಲಮಾಣಿ ಇವರು ಸರಕಾರಿ ಉದು೯ ಪ್ರೌಢಶಾಲೆ ಮುಳಗುಂದ ಶಾಲೆಗೆ ವರ್ಗಾವಣೆಗೊಂಡ ವಿಷಯ ಕೇಳಿ ಮಕ್ಕಳು ಅಳುತ್ತಾ ನೋವಾಗಿ ಮೂರ್ಚೆ ಹೋಗಿದ್ದ ಶಾಲಾ ಮಕ್ಕಳು ಎರಡು ದಿನದಿಂದ ಉಪವಾಸ ಮಾಡಿದ್ದಾರೆ.ಈ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಕೊಂಚಿಗೇರಿ ಗ್ರಾಮದಲ್ಲಿ ನಡೆದಿದೆ.ಷಣ್ಮುಖ ಭೀಮಪ್ಪ ಲಮಾಣಿ ಅಳುತ್ತಾ ಉಪವಾಸ ಗೈದ ಮಕ್ಕಳಿಗೆ ತಮ್ಮ ಕೈಯಿಂದ ಊಟ ಉಣೆಸುವ ದ್ರಶ್ಯ ಎಲ್ಲರೂ ಮನ ಕುಲುಕುವಂತೆ.ಇತ್ತು ಇಂತಹ ಶಿಕ್ಷಕರು ಸಮಾಜಕ್ಕೆ ಮಾರ್ಗದರ್ಶನವಾಗಿದ್ದಾರೆ.

ಶಾಲೆಗೆ ವರ್ಗಾವಣೆಗೊಂಡ ವಿಷಯ ಕೇಳಿ ಮಕ್ಕಳು ಅಳುತ್ತಾ ನೋವಾಗಿ ಮೂರ್ಚೆ ಹೋಗಿದ್ದ ಶಾಲಾ ಮಕ್ಕಳು
ಶಾಲಾ ಮಕ್ಕಳು ಕೊಠಡಿಯಲ್ಲಿ ಕುಳಿತು ಅಳುತ್ತಿರುವದು
ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿ, ವಿದ್ಯೆಯೆಂಬ ಸುಜ್ಞಾನದ ಬೆಳಕನ್ನು ತರುವ ಶ್ರೇಷ್ಠ ವ್ಯಕ್ತಿತ್ವ ಶಿಕ್ಷಕ ವೃತ್ತಿಯಲ್ಲಿದೆ. ಸಮಾಜಿಕವಾಗಿ ಆರ್ಥಿಕವಾಗಿ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿರಲು ಶಿಕ್ಷಕರು ಹಾಕಿ ಕೊಟ್ಟ ಭದ್ರ ಬುನಾಧಿಯಾಗಿದೆ ಇತಂಹ ಶಿಕ್ಷಕರ ಕೈಯಲ್ಲಿ ಶಿಕ್ಷಣ ಪಡೆದ ಮಕ್ಕಳು ಧನ್ಯರು.ಐದು ವರ್ಷಗಳ ಕಾಲ ಕೋಂಚಿಗೇರಿ ಸಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ಸ್ವಂತ ಸಂಬಳದಿಂದ ಶಾಲಾ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.ಗುರು ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ವಿದ್ಯಾದಾನದ ಮೂಲಕ ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡುವುದು.ಮಕ್ಕಳ ಮನಸ್ಸು ಅರ್ಥ ಮಾಡಿಕೊಂಡು ಶಿಕ್ಷಣ.ಜೊತೆಗೆ ಸಮಾಜಕ್ಕೆ ಅವರ ಕೊಡುಗೆ ಏನು ನೀಡಬಲ್ಲರು ಎಂಬುದು ಅರಿತು ಬೋಧನೆ ಮಾಡಿದ ಶಿಕ್ಷಕರಾದ ಷಣ್ಮುಖ ಭೀಮಪ್ಪ ಲಮಾಣಿ ಅವರಿಗೆ ಶಾಲಾ ಮಕ್ಕಳು ಮತ್ತು ಕೊಂಚಿಗೇರಿ ಗ್ರಾಮದವರಿಂದ ತುಂಬು ಹೃದಯದ ಕೃತಜ್ಞತೆಗಳು.
ಕಲಿಕೆ ನಿಂತ ನೀರಲ್ಲ. ಗಂಗೆಯಷ್ಟು ಆಳ, ತುಂಗೆಯಷ್ಟು ವಿಸ್ತಾರ, ಕಾವೇರಿಯಷ್ಟು ಚಲನಶೀಲ. ಸಾತ್ವಿಕತೆಯನ್ನು ಸ್ಪುರಿಸುವ ಕಾರಂಜಿ. ಕಲಿಕೆಯಲ್ಲಿ ಮಗು, ಮಾಧ್ಯಮ, ಮಾರ್ಗದರ್ಶನ, ವಿಷಯಗಳ ಮರುಪೂರಣ, ಅಗತ್ಯ ಶಿಸ್ತುಬದ್ಧವಾಗಿ ಶಿಕ್ಷಣ ನೀಡಿದ ನಿಮ್ಮಿಂದ ಕಲಿತ ಮಕ್ಕಳು ಉನ್ನತ ಸ್ಥಾನ ಅಲಂಕರಿಸಲಿ.

Leave a Reply

Your email address will not be published. Required fields are marked *