ಪೋಲಿ ಶಿಕ್ಷಕನ ‘ ಕಿಸ್ ‘ ಪುರಾಣ ವೈರಲ್ ! ಪ್ಲೀಸ್, ಮುತ್ತು ಕೊಡೇ “.

ಹಾವೇರಿ: ಇಲ್ಲೊಬ್ಬ ಶಿಕ್ಷಕ ‘ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..’ ಎಂದು ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ.ಪ್ರತಿನಿತ್ಯ ವಿದ್ಯಾರ್ಥಿನಿಗೆ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸುತ್ತಿದ್ದ ಪೋಲಿ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಸಂಭವಿಸಿದೆ.ದೇವರಗುಡ್ಡದ ಹೈಸ್ಕೂಲ್​ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಕಳೆದ ವರ್ಷ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್​ ನಂಬರ್​ ಪಡೆದಿದ್ದ. ಆನ್​ಲೈನ್​ ಪಾಠ ಮಾಡುವ ನೆಪದಲ್ಲಿ ಪ್ರತಿನಿತ್ಯ ಚಾಟ್ ಮಾಡುತ್ತಿದ್ದ ಶಿಕ್ಷಕ, ಮಾತೆತ್ತಿದರೆ ಕಿಸ್ ಕೊಡು ಎಂದು ಪೀಡಿಸುತ್ತಿದ್ದ. ಈತ ಮಾಡಿರುವ ಚಾಟಿಂಗ್​ನ ಸ್ಕ್ರೀನ್ ಶಾರ್ಟ್​ಗಳು

ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನ್ನು ಬಂಧಿಸಬೇಕು. ಕೆಲಸದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಬೆಳಗ್ಗೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಾಲೆಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *