ರಾಜ್ಯ ಸರ್ಕಾರದಿಂದ ‘ ಗ್ರಾಮ ಪಂಚಾಯ್ತಿ’ಗಳಿಗೆ 3 ನೇ ತ್ರೈಮಾಸಿಕ ಕಂತಿನ ‘ ಅನುದಾನ ಬಿಡುಗಡೆ ‘

ಬೆಂಗಳೂರು: 2021-22ನೇ ಸಾಲಿನ ಅಕ್ಟೋಬರ್ 2021ರಿಂದ ಡಿಸೆಂಬರ್ 2021ರವರೆಗಿನ ಮೂರನೇ ತ್ರೈ ಮಾಸಿಕ ಕಂತಿನ ಅನುದಾನವನ್ನು ರಾಜ್ಯ ಸರ್ಕಾರ ( Karnataka Government ) ಗ್ರಾಮ ಪಂಚಾಯ್ತಿಗಳಿಗೆ ( Gram Panchayath ) ಬಿಡುಗಡೆ ಮಾಡಿ ಆದೇಶಿಸಿದೆ.ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ ಎಂ ಅವರು ನಡವಳಿ ಹೊರಡಿಸಿದ್ದು, ರಾಜ್ಯದ 5,962 2021-22ನೇ ಸಾಲಿನ ಶಾಸನ ಬದ್ಧ ಅನುದಾನದಿಂದ ಮೂರನೇ ತ್ರೈ ಮಾಸಿಕ ಕಂತಿನ ಅನುದಾನದ ಮೊತ್ತ 225,51,07,211 ಕೋಟಿ ಹಣವನ್ನು ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಲಾಗಿದೆ.ಈ ಅನುದಾನದಲ್ಲಿ ಗ್ರಾಮ ಪಂಚಾಯ್ತಿಗಳು ವಿದ್ಯುತ್ ಬಿಲ್ ಪಾವತಿಸಲು, ಉಳಿದ ಹಣವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳುವುದು. ಗ್ರಾಮ ಪಂಚಾಯ್ತಿ ಸಿಬ್ಬಂದಿಗಳ ವೇತನ ಬಾಕಿ ಇದ್ದಲ್ಲಿ, ಅದಕ್ಕಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.ಇನ್ನೂ ಈ ತ್ರೈ ಮಾಸಿಕ ಅನುದಾನದಲ್ಲಿ 2021-22ನೇ ಸಾಲಿನಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಸ್ವಚ್ಛತೆ ಸೇವೆ ನೀಡುವವರಿಗೆ ಅನುದಾನ ಪಾವತಿಸಲು ಕ್ರಮವಹಿಸುವುದು ಎಂದು ಹೇಳಿದೆ.

Leave a Reply

Your email address will not be published. Required fields are marked *