IPL 2022 : ಕೊಹ್ಲಿ ಸೇರಿ ಈ ಆಟಗಾರರನ್ನ ಉಳಿಸಿಕೊಂಡ ‘ RCB ‘ : ಯಾವ ತಂಡದಲ್ಲಿ ಯಾರು ? ಪೂರ್ಣ ಪಟ್ಟಿ ಇಲ್ಲಿದೆ .

ನವದೆಹಲಿ : ಜನಪ್ರಿಯ ತಂಡ ಬೆಂಗಳೂರು ರಾಯಲ್‌ ಚಾಲೆಂಜರ್ಸ್(RCB) ಮುಂದಿನ ಋತುವಿನಲ್ಲಿ ಮೆಗಾ ಹರಾಜಿಗೆ ಮುಂಚಿತವಾಗಿ ತಮ್ಮ ತಂಡದಲ್ಲಿರುವ 3 ಆಟಗಾರರನ್ನ ಉಳಿಸಿಕೊಂಡಿದೆ. ಅದ್ರಂತೆ, ವಿರಾಟ್ ಕೊಹ್ಲಿ(Virat Kohli), ಗ್ಲೆನ್ ಮ್ಯಾಕ್ಸ್ ವೆಲ್(Glenn Maxwell) ಮತ್ತು ಮೊಹಮ್ಮದ್ ಸಿರಾಜ್(Mohammed Siraj) ಅವರನ್ನ ವಿವೋ ಐಪಿಎಲ್ 2022ರ ಋತುವಿನಲ್ಲಿ ಉಳಿಸಿಕೊಳ್ಳಲಾಗಿದೆ.

Ipl 2022 All Team Retained Players: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಮೆಗಾ ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ತಮ್ಮ ರಿಟೈನ್ ಪಟ್ಟಿಯನ್ನು ಪ್ರಕಟಿಸಿದೆ.ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಮೂವರು ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ (CSK) ತಂಡವು ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್ (Punjab Kings)​ ತಂಡದಿಂದ ಕೆಎಲ್ ರಾಹುಲ್ (KL Rahul), ಕ್ರಿಸ್ ಗೇಲ್ ರಿಲೀಸ್ ಆಗಿದ್ದರೆ, ಸನ್​ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಡೇವಿಡ್ ವಾರ್ನರ್ ಹಾಗೂ ರಶೀದ್ ಖಾನ್ ಅವರು ಹೊರಬಂದಿದ್ದಾರೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ರಿಲೀಸ್ ಮಾಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಫಾಫ್ ಡುಪ್ಲೆಸಿಸ್​ ಹಾಗೂ ಶಾರ್ದೂಲ್ ಠಾಕೂರ್ ರಿಲೀಸ್ ಆಗಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಇಂಗ್ಲೆಂಡ್ ಆಟಗಾರರಾದ ಜೋಫ್ರಾ ಆರ್ಚರ್ ಹಾಗೂ ಬೆನ್​ ಸ್ಟೋಕ್ಸ್​ ರನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ಪ್ರಮುಖ ಆಟಗಾರರಾದ ಸುನಿಲ್ ನರೈನ್ ಹಾಗೂ ಆಂಡ್ರೆ ರಸೆಲ್​ ರನ್ನು ಈ ಬಾರಿ ಕೂಡ ಉಳಿಸಿಕೊಂಡಿದೆ. ಹಾಗಿದ್ರೆ ಯಾವ ತಂಡ ಯಾರನ್ನು ಉಳಿಸಿಕೊಂಡಿದೆ ನೋಡೋಣ….ಸನ್​ರೈಸರ್ಸ್​ ಹೈದರಾಬಾದ್:1- ಕೇನ್ ವಿಲಿಯಮ್ಸನ್- 14 ಕೋಟಿ2- ಉಮ್ರಾನ್ ಮಲಿಕ್- 4 ಕೋಟಿ3- ಅಬ್ದುಲ್ ಸಮದ್- 4 ಕೋಟಿರಾಜಸ್ಥಾನ್ ರಾಯಲ್ಸ್:1- ಸಂಜು ಸ್ಯಾಮ್ಸನ್- 14 ಕೋಟಿ2- ಜೋಸ್ ಬಟ್ಲರ್- 10 ಕೋಟಿ3- ಯಶಸ್ವಿ ಜೈಸ್ವಾಲ್- 4 ಕೋಟಿಮುಂಬೈ ಇಂಡಿಯನ್ಸ್​:1- ರೋಹಿತ್ ಶರ್ಮಾ- 16 ಕೋಟಿ2- ಜಸ್​ಪ್ರೀತ್ ಬುಮ್ರಾ- 12 ಕೋಟಿ3- ಸೂರ್ಯಕುಮಾರ್ ಯಾದವ್​- 8 ಕೋಟಿ4- ಕೀರನ್ ಪೊಲಾರ್ಡ್​- 6 ಕೋಟಿಕೊಲ್ಕತ್ತಾ ನೈಟ್​ ರೈಡರ್ಸ್​:1- ಆಂಡ್ರೆ ರಸೆಲ್- 16 ಕೋಟಿ2- ವರುಣ್ ಚಕ್ರವರ್ತಿ- 8 ಕೋಟಿ3- ವೆಂಕಟೇಶ್ ಅಯ್ಯರ್- 8 ಕೋಟಿ4- ಸುನಿಲ್ ನರೈನ್- 6 ಕೋಟಿಚೆನ್ನೈ ಸೂಪರ್ ಕಿಂಗ್ಸ್​:1- ರವೀಂದ್ರ ಜಡೇಜಾ- 16 ಕೋಟಿ2- ಮಹೇಂದ್ರ ಸಿಂಗ್ ಧೋನಿ- 12 ಕೋಟಿ3- ಮೊಯೀನ್ ಅಲಿ- 8 ಕೋಟಿ4- ರುತುರಾಜ್ ಗಾಯಕ್ವಾಡ್- 6 ಕೋಟಿಡೆಲ್ಲಿ ಕ್ಯಾಪಿಟಲ್ಸ್​:1- ರಿಷಭ್ ಪಂತ್- 16 ಕೋಟಿ2- ಪೃಥ್ವಿ ಶಾ- 12 ಕೋಟಿ3- ಅಕ್ಷರ್ ಪಟೇಲ್- 7.5 ಕೋಟಿ4- ಅನ್ರಿಕ್ ನೋಕಿಯಾ- 6.5 ಕೋಟಿಪಂಜಾಬ್ ಕಿಂಗ್​1- ಮಯಾಂಕ್ ಅಗರ್ವಾಲ್ – 14 ಕೋಟಿ2- ಅರ್ಷದೀಪ್ ಸಿಂಗ್ – 4 ಕೋಟಿ.ರಾಯಲ್ ಚಾಲೆಂಜರ್ಸ್​ ಬೆಂಗಳೂರು:1- ವಿರಾಟ್ ಕೊಹ್ಲಿ – 15 ಕೋಟಿ2- ಗ್ಲೆನ್ ಮ್ಯಾಕ್ಸ್​ವೆಲ್- 11 ಕೋಟಿ3- ಮೊಹಮ್ಮದ್ ಸಿರಾಜ್ – 7 ಕೋಟಿ.

Leave a Reply

Your email address will not be published. Required fields are marked *