ಗದಗ : ಗುರುಕುಲ ಮಾದರಿಯಲ್ಲಿ ನಿರ್ಮಿಸಿದ್ದ ಪರ್ಣಕುಟಿಗೆ ಬೆಂಕಿ

ಗದಗ : ವಿಶಿಷ್ಟ ಮಾದರಿಯಲ್ಲಿ ಸಿದ್ಧವಾಗಿದ್ದ ಹುಲ್ಲು ಹೊದಿಕೆ ಗುಡಿಸಲು ಕೊಠಡಿ ಧಗಧಗನೆ ಹೊತ್ತಿ ಉರಿದ ಘಟನೆ ಗದಗದ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ. ಇದಕ್ಕೆ ʻಪರ್ಣ ಕುಟಿʼ ಎಂದು ಕರೆಯುತ್ತಿದ್ದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಬಂದ ವಿಶೇಷ ಅತಿಥಿಗಳಿಗೆ, ವಿದ್ಯಾರ್ಥಿಗಳ ವಿಶೇಷ ತರಬೇತಿಗಾಗಿ, ಉಪನ್ಯಾಸಕರ ಮೀಟಿಂಗ್ ಗಾಗಿ, ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಲಾಗ್ತಿದ್ದ ವಿಶೇಷ ಸ್ಥಳ ಇದಾಗಿತ್ತು.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಭತ್ತದ ಹುಲ್ಲು, ಬಿದಿರು ಹುಲ್ಲು, ಅನೇಕ ಜಾತಿಯ ಹುಲ್ಲುಗಾವಲು, ಕಟ್ಟಿಗೆ, ಬಿದಿರುಗಳಿಂದ ಸುಂದರವಾಗಿ‌ ನಿರ್ಮಿಸಿದ್ದ ಗುಡಿಸಲುನಂತಹ ವಿಶೇಷ ಸ್ಥಳವಾಗಿತ್ತು.

ತಡರಾತ್ರಿ ಬೆಂಕಿಯ‌ ಕೆನ್ನಾಲೆಗೆ ವಿಶೇಷ ಕೊಠಡಿ ಭಸ್ಮವಾಗಿದೆ. ಇಲ್ಲಿನ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ತಡವಾಗಿ ಆಗಮಿಸಿದಕ್ಕೆ ಸ್ಥಳಿಯರ ಹಾಗೂ ವಿವಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು. ದುಷ್ಕರ್ಮಿಗಳ ಸಂಚು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದು ಆಕಸ್ಮಿಕವೇ ಅಥವಾ ಕಿಡಿಗೆಡಿಗಳ ಕೃತ್ಯವೇ ಎಂಬುದು ತನಿಖೆ ನಂತರ ಬಯಲಾಗಬೇಕಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *