ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ನೀರಿನ ಟ್ಯಾಂಕರ್ ; ಸ್ಥಳದಲ್ಲಿಯೇ ಚಾಲಕ ಸಾವು

ಕುಕನೂರು ತಾಲೂಕಿನ ಚಿಕ್ಕೇನಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್‌ನ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಅಪಘಾತದಲ್ಲಿ (Road Accident) ತೀವ್ರ ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟ್ಯಾಂಕರ್‌ ಚಾಲಕ ಮಾರುತಿ ತಳವಾರ (24) ಮೃತ ದುರ್ದೈವಿ.

ಚಾಲಕ ಮಾರುತಿ ಕುಕನೂರು ನಿವಾಸಿಯಾಗಿದ್ದು, ಚಿಕ್ಕೇನಕೊಪ್ಪದ ಮೂಲಕ ಬಿನ್ನಾಳ ಕಡೆಗೆ ನೀರಿನ ಟ್ಯಾಂಕರ್‌ನಲ್ಲಿ ಹೊರಟಿದ್ದರು. ಈ ವೇಳೆ ವಾಹನ ನಿಯಂತ್ರಣಕ್ಕೆ ಸಿಗದೆ ನೇರವಾಗಿ ಹಳ್ಳಕ್ಕೆ ಬಿದ್ದಿದೆ. ಈ ವೇಳೆ ಚಾಲಕನ ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಾಲಕನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರೋಣತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *