ಮಾವನ ಮನೆಗೆ ಬಂದಿದ್ದ ಅಳಿಯನಿಂದ ಮಗಳ ಮೇಲೆ ಚಾಕು ಇರಿದು ಹಲ್ಲೆ

ಗದಗ : ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ, ಆರು ವರ್ಷದ ಮಗನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ. ಮಧ್ಯರಾತ್ರಿ ಗೋವಾದಿಂದ ಮಾವನ ಮನೆಗೆ ಬಂದಿದ್ದ ಅಳಿಯ ರಾಕ್ಷಸಿ ಕೃತ್ಯ ಎಸಗಿದ್ದು, ಗಾಯಾಳು ತಾಯಿ, ಮಗುವನ್ನ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಾಕು ಇರಿದ ಮುರಳಿ ಪೂಜಾರ್ (32) ಎಂಬಾತನನ್ನ ಮರಕ್ಕೆ ಕಟ್ಟಿ ಹಾಕಿದ್ದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ‌. ಗೋವಾದಲ್ಲಿ ಕೆಲಸ ಮಾಡ್ತಿದ್ದ ಮುರುಳಿ ಅಲ್ಲಿ‌ ಪತ್ನಿಯೊಂದಿಗೆ ಕಿರಿಕ್ ಮಾಡ್ಕೊಂಡಿದ್ದ. ಹೀಗಾಗಿ ಪತ್ನಿಯನ್ನ ಬಿಟ್ಟು ಮಗುವಿನೊಂದಿಗೆ ಡೋಣಿ ತಾಂಡಾದಲ್ಲಿನ ತವರು ಮನೆಗೆ ಸಕ್ಕುಬಾಯಿ ಬಂದಿದ್ರು. ರಾಜಿ ಪಂಚಾಯ್ತಿ ಬಳಿಕ ಮುರಳಿ ಹಾಗೂ ಸಕ್ಕುಬಾಯಿ ಅವರನ್ನ ಒಂದು ಮಾಡೋದಕ್ಕೆ ಹಿರಿಯರು ಮುಂದಾಗಿದ್ರು. ನಿನ್ನೆಯಷ್ಟೆ ಹಿರಿಯರು ಸೇರಿ ಮಾತುಕತೆ ನಡೆಸಿದರು.

ಬೆಳಗ್ಗೆ ಅಳಿಯನೊಂದಿಗೆ ಗೋವಾಕ್ಕೆ ಕಳಿಸೋದಕ್ಕೆ ನಿರ್ಧಾರವನ್ನೂ ಮಾಡ್ಲಾಗಿತ್ತು. ಆದ್ರೆ ಏಕಾ ಏಕಿ ಮಧ್ಯರಾತ್ರಿ ಬಂದಿದ್ದ ಕಳಿಯ ಸಕ್ಕುಬಾಯಿ, ಶಿವಂ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆಯುತ್ತಿದ್ದು, ಪ್ರಾಣಾಪಾಯ ಇಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಚಾಕು ಇರಿದ ಮುರಳಿಯನ್ನ ಕೂಡಿ ಹಾಕಿದ್ದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *