ಗೋಚರಿಸಿದ ಪಾರ್ಶ್ವ ಸೂರ್ಯಗ್ರಹಣ

ಗದಗ ಜಿಲ್ಲೆ ಅಡವಿಸೋಮಾಪೂರ ಗ್ರಾಮದಲ್ಲಿ ಮಂಗಳವಾರ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿತು. ಸಂಜೆ 5.12ಕ್ಕೆ ಆರಂಭವಾಗಿ 5.42 ಮುಕ್ತಾಯವಾಯಿತು.ಗರ್ಭಿಣಿಯರು ಮನೆಯಲ್ಲಿ ಕುಳಿತಿದ್ದರು. ಚಿಕ್ಕ ಮಕ್ಕಳು ಹೊರಗಡೆ ತಿರುಗಾಡುವುದು ಕಾಣಿಸಿತು. ಕುಡಿಯುವ, ಬಳಕೆಯ ನೀರಿನಲ್ಲಿ ಕರಿಕೆ ಹುಲ್ಲು ಹಾಕಿದರು.

ಅಮಾವಾಸ್ಯೆ ಇರುವುದರಿಂದ ಹಲವು ಮನೆಗಳಲ್ಲಿ ಹೋಳಿಗೆಯ ಸಿಹಿ ಸಂಭ್ರಮ ಕಾಣಿಸಲಿಲ್ಲ.ಪ್ರಜ್ಞಾವಂತರು ಗ್ರಹಣವನ್ನು ವೀಕ್ಷಿಸಿ ತಮ್ಮ ಮೊಬೈಲ್‌ಗಳಲ್ಲಿ ಚಿತ್ರಗಳನ್ನು ಸೆರೆ ಹಿಡಿದು ತಮ್ಮ ಆತ್ಮೀಯರಿಗೆ ರವಾನಿಸಿ ಸಂಭ್ರಮಿಸಿದರು. ಇನ್ನು ಕೆಲವೆಡೆ ಮೂಢನಂಬಿಕೆಗಳನ್ನು ನಂಬದೇ ಊಟ, ಉಪಾಹಾರ ಸೇವನೆ ಮಾಡಿದರು.

ಹಲವು ದೇವಸ್ಥಾನಗಳಲ್ಲಿ ಗ್ರಹಣ ಮುಗಿದ ನಂತರ ತೊಳೆದು, ಸ್ವಚ್ಛಗೊಳಿಸಿ ಪೂಜೆ ಕಾರ್ಯಗಳು ನೆರವೇರಿದವು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ನಾನ ಮಾಡಿ ಅಮಾವಾಸ್ಯೆ ಆಚರಿಸಿದರು. ಯುವಕರಾದ ಸಂತೋಷ , ರಮೇಶ , ಮಂಜುನಾಥ, ಮಂಜು ನಿಂಗಪ್ಪ, ಸುರೇಶ ಮಂಜುನಾಥ ಖಗೋಳ ವಿಸ್ಮಯವನ್ನು ವೀಕ್ಷಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *