ಗದಗ : ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ಸಾವು

ಗದಗ : ಅ. 22. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವುನ್ನಪಿದ ಘಟನೆ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಬಳಿ ನಡೆದಿದೆ.

ಮೃತನನ್ನು ಬಿಂಕದಕಟಿ ನಿವಾಸಿ ಯಮನೂರಪ್ಪ ಯಲ್ಲಪ್ಪ ಕೊತಂಬರಿ (61) ಎಂದು ಗುರುತಿಸಲಾಗಿದೆ.ಇವರು ಡಂಬಳ ಗ್ರಾಮದಲ್ಲಿರುವ ಹೊಲಕ್ಕೆ ಹೊಗಿ ವಾಪಸ್ ಗದಗ ಕಡೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಲಾರಿಯೊಂದು ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಚಾಲಕನ ನಿರ್ಲಕ್ಷ್ಯದಿಂದ ಪಾದಚಾರಿಯ ತಲೆಯ ಮೇಲೆ ಹರಿದು ಯಮನೂರಪ್ಪ ಯಲ್ಲಪ್ಪ ಕೊತಂಬರಿ ಸ್ಥಳದಲ್ಲೇ ಸಾವನ್ನಪ್ಪಿದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ, ಎನ್ನಲಾಗಿದೆ.

ಈ ದುರ್ಘಟನೆ ಅಡವಿಸೋಮಾಪೂರ ಗ್ರಾಮದ ಶಾಲೆಯ ಪಕ್ಕ ಹಳೆಯ NH 63 ರಸ್ತೆಯಲ್ಲಿ ನಡೆದಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಸಿಪಿಐ, ಚಂದ್ರಶೇಖರ,ಎನ್ ಹರಿಹರ ಬೇಟಿ ನೀಡಿ ಪರಿಶೀಲಿಸಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ ಗ್ರಾಮೀಣ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *