ಗದಗ : ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ !

ಗದಗ : ಗದಗ ತಾಲೂಕಿನ ಅಡವಿಸೋಮಾಪೂರ NH 63 ರಸ್ತೆಗೆ ಹೊಂದಿಕೊಂಡಿರುವ ಗದ್ದಿಹಳ್ಳ ಪಕ್ಕದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಮೃತ ಮಹಿಳೆಯು ಸುಮಾರು 45 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಮಹಿಳೆಯ ಹಣೆಯ ಮೇಲೆ ಅಚ್ಚಿ , ಮೃತ ಮಹಿಳೆಯು ಗಂಡು ಮಕ್ಕಳ ಅಂಗಿ ಪ್ಯಾಂಟ್ ಹಾಕಿಕೊಂಡಿದ್ದಾಳೆ, ಎನ್ನಲಾಗಿದೆ. ಹೆಸರು ವಿಳಾಸ ತಿಳಿದು ಬಂದಿಲ್ಲ ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಗದಗ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎರಡು ದಿನಗಳ ಹಿಂದೆ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲೇ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಸ್ಥಳಕ್ಕೆ ಗದಗ ಗ್ರಾಮೀಣ ಸಿ ಪಿ ಐ ಚಂದ್ರಶೇಖರ ಹರಿಹರ ,ಎ ಎಸ್ ಐ ಎನ್ ಎಪ್ ಬೇಟಗೇರಿ ,ಮಹಿಳಾ ಪಿ ಎಸ್ ಐ ಶಕುಂತಲಾ ನಾಯಕ್,ಮತ್ತು ಸಿಬ್ಬಂದಿಗಳು ಇದ್ದರು. ಗದಗ ಗ್ರಾಮಿಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *