ಮುಳುಗುಂದ : ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಗದಗ : ಗದಗ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ , ಮಳೆಯಿಂದ ಸಾಕಷ್ಟು ಪ್ರಮಾಣದ ಹಾನಿ ಆಗುತ್ತಿದೆ , ಕಳೆದ ಬಾರಿ ಸುರಿದ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿವೆ , ಈ ಹಿನ್ನಲೆಯಲ್ಲಿ ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ವಿಪರಿತ ಮಳೆಯಿಂದ ಮನೆ ಗೋಡೆ ಕುಸಿದ ಪರಿಣಾಮ ಒರ್ವ ವ್ರದ್ದ ಸಾವನ್ನಪ್ಪಿದ ಘಟನೆ ನಡೆದಿದೆ.

ತಿಮ್ಮಣ್ಣ ಧರ್ಮಣ್ಣ ಕಳ್ಳಿಮನಿ ( 50 ) ಮೃತಪಟ್ಟ ದುರ್ದೈವಿಯಾಗಿದ್ದಾನೆ . ನಿರಂತರವಾಗಿ ಸುರಿದ ಮಳೆಯಿಂದ ಮನೆ ಗೋಡೆ ನೆನೆದು , ತಿಮ್ಮಣ್ಣ ಮನೆಯಲ್ಲಿ ಮಲಗಿದ್ದಾಗ ಒಮ್ಮೆಲೆ ಮನೆ ಗೋಡೆ ಕುಸಿದು ಮೈಮೇಲೆ ಬಿದ್ದಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎನ್ನಲಾಗಿದೆ . ತಹಸೀಲ್ದಾರ ಕಿಶನ್ ಕಲಾಲ್ , ಎಮ್ . ಎ ನದಾಫ್ , ಎಸ್.ಎಸ್ ಪಟ್ಟೇದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಮುಳಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *