ಶೀಲ ಶಂಕಿಸಿ ಹೆಂಡತಿ ಕೊಲೆಗೈದ ಗಂಡ !

ಗದಗ : ಅಕ್ಟೋಬರ : 08 ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಹೆಂಡತಿಯ ಶೀಲ ಶಂಕಿಸಿ ಆಗಾಗ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕದಾಂಪೂರ ಗ್ರಾಮದ ಶಾಂತವ್ವ ಅಚ್ಚುಮನಿ (27) ಕೊಲೆಯಾದ ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.

ಧಾರವಾಡ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಫಕ್ಕಿರೇಶನಿಗೆ (ರಾಚ್ಚಪ್ಪ ಬಸವೇಣೆಪ್ಪ ಗುಳಗನ್ನವರ ) ಇವನಿಗೆ ಮದುವೆ ಮಾಡಿ ಕೊಡಲಾಗಿತ್ತು. ಇವರಿಗೆ ಮೂರು ಮಕ್ಕಳು ಇದ್ದು, ಆಗಾಗ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಹಿರಿಯರು ಬುದ್ದಿ ಹೇಳಿ ರಾಜಿ ಸಂಧಾನ ಮಾಡಿಸಿದ್ದರು.ಒಂದು ತಿಂಗಳ ಹಿಂದೆ ಹೆಂಡತಿ ಜೊತೆ ಜಗಳ ಮಾಡಿ ತವರು ಮನೆಗೆ ಕಳುಹಿದ್ದ. ಫೋನಿನಲ್ಲಿ ಗಂಡ ಹೆಂಡತಿ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ.

ಅಕ್ಟೋಬರ್ 8 ರಂದು ಹೆಂಡತಿ ಊರಿಗೆ ಬಂದಿದ್ದ ಫಕ್ಕಿರೇಶ ಊಟ ಮಾಡಿ ರೂಂ ಗೆ ಹೋಗಿದ್ದ ಆವಾಗ ಹೆಂಡತಿಯ ಹೊಟ್ಟೆಯ ಬಲಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದಾನೆ.ಎನ್ನಲಾಗಿದೆ. ಶಾಂತವ್ವ ನನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಆರೋಪಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ ಈ ಕುರಿತು ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *