ಗದಗದಲ್ಲಿ ಹಾಡು ಹಗಲೇ ಮಹಿಳೆಯ ಬೀಕರ ಕೊಲೆ

ಗದಗ : ಗದಗ ಜಿಲ್ಲೆಯಲ್ಲಿ ಹಾಡುಹಗಲೇ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಗದುಗಿನ ಮುಳುಗುಂದ ನಾಕಾದ ಎಸ್ ಬಿ ಬೇಕರಿಯಿಂದ ತಿನ್ನಿಸು ಖರೀದಿಸಿ ಮನೆ ಕಡೆ ಹೋರಟಿರುವಾಗ ಮಹಿಳೆಯೊಬ್ಬಳ ಬೀಕರ ಹತ್ಯೆಗೆಯಲಾಗಿದೆ .ದುಷ್ಕರ್ಮಿಗಳು ಹಾಡು ಹಗಲೇ ಮಹಿಳೆಯ ಮೇಲೆ ಮನಸೋ ಇಚ್ಛೆ ಕುತ್ತಿಗೆ ಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾರೆ.

ಶಿಂಗಾಟಯನಕೇರಿ ತಾಂಡಾದ ಶೋಭಾ ಲಮಾಣಿ , ಅಲಿಯಾಸ್, ಮೀನಾಜ್ ಬೇಪಾರಿ ( 28 ) ಹತ್ಯೆಗೀಡಾದ ಮಹಿಳೆ ಎಂದು ತಿಳಿದು ಬಂದಿದೆ. ಸೋಮವಾರ ಮಧ್ಯಾಹ್ನ ನಗರದ ಮುಳಗುಂದ ನಾಕಾ ಬಳಿ ಜನಬಿಡ ಪ್ರದೇಶದ ಎಸ್.ಬಿ. ಬೇಕರಿ ಎದುರು ಭೀಕರವಾಗಿ ಹತ್ಯೆ ನಡೆದಿದೆ.

ಈ ಹತ್ಯೆಯಿಂದಾಗಿ ಗದಗ – ಬೆಟಗೇರಿ ಅವಳಿ ನಗರದ ಜನತೆಯಲ್ಲಿ ಭಯ ಭೀತಿಯನ್ನು ಹುಟ್ಟು ಹಾಕುವಂತೆ ಮಾಡಿದೆ. ಇದು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ !

ಘಟನಾ ಸ್ಥಳಕ್ಕೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು , ಡಿವಾಯ್‌ಎಸ್‌ಪಿ ಶಿವಾನಂದ ಪವಾಡಶೆಟ್ಟರ್ , ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಹತ್ಯೆ ಮಾಡಿದ್ದು , ಯಾರು ಹಾಗೂ ಯಾತಕ್ಕಾಗಿ ಹತ್ಯೆ ನಡೆದಿದೆ ಎಂದು ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದು ಬರಬೇಕಿದೆ . ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *