ಗದಗನಲ್ಲಿ ಮೂವರು ಪಿ ಎಪ್ ಐ ಕಾರ್ಯಕರ್ತರ ಬಂಧನ

ಗದಗ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಮತ್ತೊಮ್ಮೆ ಪೋಲಿಸರು ಸಮರ ಸಾರಿದ್ದು, ಪ್ರಾಥಮಿಕ ಮೂಲಗಳ ಪ್ರಕಾರ ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಪೊಲೀಸರು ಏಕಕಾಲಕ್ಕೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ, 170ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಅದರಂತೆ ಗದಗ ನಗರದಲ್ಲಿಯೂ ಸಹ ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.ಗದಗ ಇತ್ತೀಚೆಗೆ ದೇಶದೆಲ್ಲೆಡೆ SDPI ಹಾಗೂ PFI ಮುಖಂಡರ ಮೇಲೆ N I A ತನಿಖಾ ತಂಡ ದಾಳಿ ಮಾಡಿ ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಗದಗ ಶಹರ ಪೊಲೀಸರು ಇಬ್ಬರನ್ನು ಬೆಟಗೇರಿ ಪೊಲೀಸರು ಓರ್ವ PFI ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ರಹೆಮತ್ ನಗರದ ನಿವಾಸಿ ರುಸ್ತುಂ ಗೌಂಡಿ ಹಾಗೂ ಕಾಗದಗಾರ ಓಣಿಯ ನಿವಾಸಿ ಸರ್ಪರಾಜ ದಂಡಿನ ಬೆಟಗೇರಿಯ ಸನಾವುಲ್ ಬಂಧಿತ ಕಾರ್ಯಕರ್ತರು.ಎನ್ನಲಾಗಿದೆ

ಸಿಪಿಐ ಜಯಂತ ಗೌಳಿ ನೇತೃತ್ವದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ, ಬಳಿಕ ಗದಗ ತಹಶೀಲ್ದಾರ ಕಿಶನ್ ಕಲಾಲ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತ ರುಸ್ತುಂ ಗೌಂಡಿ ಹಾಗೂ ಸರ್ಪರಾಜ್ ದಂಡಿನ ಇಬ್ಬರನ್ನೂ ಅಕ್ಟೋಬರ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಎಂದು ಗದಗ ತಹಶೀಲ್ದಾರ್ ಕಿಶನ್ ಕಲಾಲ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *