ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಜಿಲ್ಲೆಯ ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್ ಬಳಿಯಲ್ಲಿ ಲಾರಿಯೊಂದು ಕಾರು, ಬೈಕ್ ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಕುಡುಚಿ ಪೊಲೀಸ್ ಠಾಣೆಯ ಎಎಸ್‌ಐ ಹಲಗಿ ಅವರ ಪತ್ನಿ ರುಕ್ಮಿಣಿ, ಪುತ್ರಿ ತೆರಳುತ್ತಿದ್ದಂತ ಕಾರಿಗೆ ಸಿಮೆಂಟ್ ಲಾರಿಯೊಂದು ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್ ಬಳಿಯಲ್ಲಿ ಡಿಕ್ಕಿಯಾಗಿದೆ.ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿಯೇ ಕಾರು ಚಾಲಕ, ಎಎಸ್‌ಐ ಪತ್ನಿ ರುಕ್ಮಿಣಿ ಹಲಕಿ (48) ಹಾಗೂ ಅವರ ಪುತ್ರಿ ಸಾವನ್ನಪ್ಪಿದ್ದಾರೆ. ಇದಲ್ಲದೇ ಲಾರಿ ಬೈಕ್ ಗೂ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದಂತ ವೃದ್ಧೆ ಹನುಮವ್ವ ಸ್ಥಳದಲ್ಲಿಯೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಇನ್ನೂ ಈ ಭೀಕರ ಅಪಘಾತದಲ್ಲಿ ( Accident ) ಮತ್ತೆ ಕಾರಿನಲ್ಲಿದ್ದ ಇಬ್ಬರು, ಬೈಕ್ ನಲ್ಲಿದ್ದಂತ ಇಬ್ಬರು ಸೇರಿ ನಾಲ್ವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಆ ನಾಲ್ವರ ಸ್ಥಿತಿ ಗಂಭೀರಗೊಂಡಿದೆ ಎನ್ನಲಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *