ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರು ಬೀಜಗಳು ವಿತರಣೆ, ಕೀಟನಾಶಕಗಳು, ಸ್ಪ್ರೇಯೆರ್, ಸೈಕಲ್ ಎಡೆದಿಂದು ಪಡೆದುಕೊಳ್ಳಲು ಸೂಚನೆ

ಹಿಂಗಾರು ಬಿತ್ತನೆಗೆ ಬೀಜಗಳು ಲಭ್ಯ

ಆತ್ಮೀಯ ರೈತ ಬಾಂಧವರೇ ಈ ಸಲದ ಮುಂಗಾರು ಬೆಳೆಯು ಅತಿಯಾದ ಮಳೆಯಿಂದಾಗಿ ಹಾಳಾಗಿದೆ ಆಗಾಗಿ ಹಿಂಗಾರಿನಲ್ಲಿ ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆದು ತಮಗಾದ ನಷ್ಟವನ್ನು ಸರಿದೂಗಿಸಲು ಬಯಸುವ ರೈತರಿಗೆ ಒಂದು ಒಳ್ಳೆ ಸುದ್ದಿ. ಈಗ ಹಿಂಗಾರಿನಲ್ಲಿ ಬಿತ್ತನೆ ಮಾಡಲು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳು ಲಭ್ಯವಿದ್ದು, ರೈತರು ತಮಗೆ ಬೇಕಾದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕೇಳಿ ಪಡೆದುಕೊಳ್ಳಬೇಕು.

ಹಿಂಗಾರಿನಲ್ಲಿ ಹೆಚ್ಚಾಗಿ ಬೆಳೆಯುವ ಹಿಂಗಾರಿ ಜೋಳ ಮತ್ತು ಹಿಂಗಾರಿ ಕಡಲೆ ಹಿಂಗಾರಿನಲ್ಲಿ ಹೆಚ್ಚಾಗಿ ಬೆಳೆಯುವ ಹಿಂಗಾರಿ ಜೋಳ ಮತ್ತು ಹಿಂಗಾರಿ ಕಡಲೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತವೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಬೀಜಗಳಿಗೆ ಬೀಜೋಪಚಾರ ಮಾಡಿರಲಾಗುತ್ತದೆ ಅದರಿಂದ ಬೀಜಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ. ಸಾಮಾನ್ಯ ಬೀಜಗಳಿಗೆ ಹೋಲಿಸಿದರೆ ಇವುಗಳ ಇಳುವರಿಯು ಅಧಿಕವಾಗಿರುತ್ತದೆ ಹಾಗೂ ಇವುಗಳಿಗೆ ಹೆಚ್ಚಿನ ರೋಗ ಮತ್ತು ಕೀಟದ ಬಾಧೆ ಇರುವುದಿಲ್ಲ.

ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಜೋಳದ ಬೀಜಗಳನ್ನು ಉಪಚಾರ(seed hardening) ಮಾಡಲಾಗಿರುತ್ತದೆ. ಇಂತಹ ಬೀಜಗಳಿಂದ ಹುಟ್ಟಿದ ಸಸಿಗಳು ಸಮಾನಾಂತರದ ಬೆಳವಣಿಯನ್ನು ಹೊಂದುತ್ತವೆ ಇದರಿಂದ ಇಳುವರಿಯ ಪ್ರಮಾಣ ಜಾಸ್ತಿಯಾಗುತ್ತದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಕಡಲೆ ಬೀಜ ಗಳಿಗೆ ರೈಜೋಬಿಯಂ ಎಂಬ ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡಿರುತ್ತಾರೆ.

ರೈಜೋಬಿಯಂ ಒಂದು ಬ್ಯಾಕ್ಟೀರಿಯಾ ಆಗಿದ್ದು, ಇದು ಗಿಡಗಳಿಗೆ ಮತ್ತು ಬೆಳೆಗಳಿಗೆ ನೈಸರ್ಗಿಕವಾಗಿ ಸಾರಜನಕವನ್ನು ಪೂರೈಸುತ್ತದೆ, ಇದರಿಂದ ರೈತರು ಗಿಡಗಳಿಗೆ ಮತ್ತು ಬೆಳೆಗಳಿಗೆ ಹೆಚ್ಚಿನ ರಸಗೊಬ್ಬರಗಳನ್ನು ಬಳಸುವ ಅಗತ್ಯವಿರುವುದಿಲ್ಲ ಹಾಗೂ ಇದರಿಂದ ಮಣ್ಣಿನ ಗುಣಮಟ್ಟ ಕೂಡ ಹೆಚ್ಚುತ್ತದೆ ಮತ್ತು ಮಣ್ಣಿನಲ್ಲಿ ಸಿಗುವಂತ ಸೂಕ್ಷ್ಮಾಣು ಜೀವಿಗಳಿಗೆ ಕೂಡ ಇದರಿಂದ ತುಂಬಾ ಉಪಯೋಗಕಾರಿಯಾಗಿದೆ.

ಈ ಬೀಜಗಳು ಹೊರಗಡೆ ರಸಗೊಬ್ಬರ ಅಂಗಡಿಗಳಲ್ಲಿ ಸಿಗುವ ಬೀಜಗಳಿಗಿಂತ ತುಂಬಾ ಗುಣಮಟ್ಟದ್ದಾಗಿವೆ. ಹಾಗಾಗಿ ಎಲ್ಲ ರೈತರು ತಮಗೆ ಬೇಕಾದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *