ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಗದಗ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2022-23ನೇ ಸಾಲಿಗೆ ವ್ಯಾಪಾರ ಉದ್ದಿಮೆ ಪ್ರಾರಂಭಿಸಲು ಅಥವಾ ಅಭಿವೃದ್ಧಿಪಡಿಸಲು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ , ಕ್ರಿಶ್ಚಿಯನ್ , ಜೈನ್ , ಬೌದ್ಧರು , ಸಿಖ್ಯರು , ಫಾರ್ಸಿಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದವರಿಗೆ 18 ರಿಂದ 55 ವರ್ಷ ವಯೋಮಿತಿಯುಳ್ಳ ಆಸಕ್ತರಿಂದ ವ್ಯಾಪಾರ ಉದ್ಯಮಿಗಳಿಗೆ ನೇರಸಾಲ ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸಲು ನಿಗಮದ ಅರ್ಜಿ ಆಹ್ವಾನಿಸಲಾಗಿದೆ

ಅರ್ಹ ಅಲ್ಪಸಂಖ್ಯಾತರು ನಿಗಮದ https : kmdconline . karnataka.gov . in ದಿಂದ ಆನ್‌ಲೈನ್ ಅರ್ಜಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಬಹುದು .

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು , ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ , ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ , 1 ನೇ ಮಹಡಿ , ಜಿಲ್ಲಾ ನ್ಯಾಯಾಲಯ ಎದುರುಗಡೆ ಹುಬ್ಬಳ್ಳಿ ರೋಡ , ಗದಗ ಇವರನ್ನು ಸಂಪರ್ಕಿಸಬಹುದು .

Leave a Reply

Your email address will not be published. Required fields are marked *