ಮಕ್ಕಳ ಕಳ್ಳರ ಸುಳ್ಳು ವದಂತಿಗಳನ್ನು ಯಾರು ನಂಬಬಾರದು : ಗದಗ ಎಸ್‌ಪಿ ಶಿವಪ್ರಕಾಶ್ ದೇವರಾಜು

ಗದಗ : ಗದಗ, ಜಿಲ್ಲೆಯ ಜನರ ಮನಸ್ಸಿನಲ್ಲಿ ಭಯ ಶುರುವಾಗಿದೆ. ವಾಟ್ಸಪ್, ಫೇಸ್ಬುಕ್ ಗಳಲ್ಲಿ ಮಕ್ಕಳ ಕಳ್ಳರ ಗ್ಯಾಂಗ್ ಬಗ್ಗೆ ಪೋಟೋ, ವಿಡಿಯೋ ಹಾಕಿ ಜನರಲ್ಲಿ ಆತಂಕ ಬರುವ ಸನ್ನಿವೇಶ ಸೃಷ್ಟಿಯಾಗಿದೆ,

ಮಕ್ಕಳನ್ನ ಕಿಡ್ನ್ಯಾಪ್ ಹತ್ಯೆ ಮಾಡುವ ಗುಂಪೊಂದು ಬಂದಿದೆ. ವಿದೇಶದಿಂದ ಬಂದಿರುವ ಈ ಗುಂಪು ಮಕ್ಕಳನ್ನ ಟಾರ್ಗೆಟ್ ಮಾಡಿ ಆಪರೇಟ್ ಮಾಡ್ತಿದೆ ಅನ್ನೋ ರೀತಿಯಲ್ಲಿ ವೀಡಿಯೋಗಳು ಹರಿದಾಡ್ತಿದ್ದು, ಇಂತಹ ಯಾವುದೇ ವೀಡಿಯೋಗಳನ್ನ ಸರ್ಕ್ಯುಲೆಟ್ ಮಾಡಬಾರದು ಎಂದು ಗದಗ ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ಈ ಬಗ್ಗೆ ವೀಡಿಯೋ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಮಕ್ಕಳ ಕಳ್ಳರ ವೀಡಿಯೋ ಎಂದು ಬಿಂಬಿಸುವ ವೀಡಿಯೋಗಳನ್ನ ಹರಿಬಿಡಲಾಗ್ತಿದೆ. ಇದರಿಂದಾಗಿ ಸಂದೇಹದ ಹಿನ್ನೆಲೆಯಲ್ಲಿ ಜನರನ್ನ ಹಡಿದು ಥಳಿಸುವ ಪ್ರಕರಣ ಬೆಳಕಿಗೆ ಬಂದಿವೆ. ಆದರೆ ಗದಗ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಪ್ರಕರಣಗಳು ದಾಖಲಾಗಿಲ್ಲ. ಸಂದೇಹ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಿನ್ನೆ (ಮಂಗಳವಾರ) ಮಕ್ಕಳ ಕಳ್ಳ ಅಂತ ಓರ್ವ ವ್ಯಕ್ತಿಯನ್ನ ಸ್ಥಳೀಯರು ಹಿಡಿದಿದ್ದರು. ಆದರೆ ಕೊಲ್ಕತ್ತಾ ಮೂಲದ ವ್ಯಕ್ತಿ ಸಿಕ್ಕಿದ್ದ. ಆತ ಮಕ್ಕಳಿಗೆ ಚಾಕೊಲೇಟೆ ಕೊಡಿಸಿದ್ದ ಎಂಬ ಕಾರಣಕ್ಕೆ ಸ್ಥಳೀಯರು ಆತನನ್ನ ಹಿಡಿದು ಥಳಿಸಿದ್ದರು. ವಿಚಾರಣೆ ನಡೆಸಿದಾಗ ಆತ ಮಕ್ಕಳ ಕಳ್ಳ ಅಲ್ಲ ಅನ್ನೋದು ಗೊತ್ತಾಗಿದೆ. ಪಿಕ್ ಪ್ಯಾಕೆಟ್ ಕಳ್ಳತನ ಮಾಡುವವನ ಮೇಲೆ ಅನುಮಾನ ಇದೆ. ಹೀಗಾಗಿ ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಅನುಮಾನ ಮೂಡಿಸುವ ವ್ಯಕ್ತಿಗಳು ಕಂಡುಬಂದ್ರೆ 11ಗೆ ಕರೆ ಮಾಡಿ: ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಹಲ್ಲೆ ಮಾಡುವ ಅಥವಾ ಥಳಿಸುವುದರ ಬದಲು ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಲಿದ್ದಾರೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *