ಪಾಕ್ ವಿರುದ್ಧ ಗೆದ್ದು 6 ನೇ ಬಾರಿ ಏಷ್ಯಾ ಕಪ್ 2022 ಮುಡಿಗೇರಿಸಿಕೊಂಡ ಲಂಕಾ ಪಡೆ

ಇಂದು ನಡೆದ ಏಷ್ಯಾಕಪ್ ಫೈನಲ್​​ನಲ್ಲಿ ಅಚ್ಚರಿಯ ಪಲಿತಾಂಶ ಹೊರಬಿದ್ದಿದ್ದು, ಬಲಿಷ್ಠ ಪಾಕ್ ತಂಡವನ್ನು ಮಣಿಸಿ ಶ್ರೀಲಂಕಾ ತಂಡ 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇರಿದೆ. ಸತತ ಎರಡು ಬಾರಿ ಭಾರತ ಚಾಂಪಿಯನ್ ಆದ ನಂತರ ಏಷ್ಯಾಕಪ್ ಪ್ರಶಸ್ತಿ ಶ್ರೀಲಂಕಾಕ್ಕೆ ಮರಳಿದೆ.ರೋಚಕ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಆರನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ದುಬೈನಲ್ಲಿ ನಡೆದ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಾಸುನ್ ಶನಕಾ ತಂಡವು ಪಾಕಿಸ್ತಾನಕ್ಕೆ 171 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಬಾಬರ್ ಅಜಮ್ ನೇತೃತ್ವದ ಇಡೀ ತಂಡ ಕೇವಲ 147 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಶ್ರೀಲಂಕಾ ಆರನೇ ಏಷ್ಯಾಕಪ್ ಗೆದ್ದುಕೊಂಡಿತು.

Leave a Reply

Your email address will not be published. Required fields are marked *