ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಂದಾಜು 4,ಕೋಟಿ ಮೌಲ್ಯದ ಔಷಧ ನಾಶ !

ಗದಗ : ಪ್ರತಿಷ್ಠಿತ ಗದಗ ಜಿಲ್ಲಾ ಆಸ್ಪತ್ರೆ ಒಂದಿಲ್ಲೊಂದು ಸುದ್ದಿಯಲ್ಲಿ ಇದ್ದೆ ಇರುತ್ತದೆ. ಔಷಧ ದಾಸ್ತಾನು ಕೊಠಡಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ ಸಲಕರಣೆಗಳು ಹಾಳಾದ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಸತತ ಮಳೆ ಹಾಗೂ ಆಸ್ಪತ್ರೆ ಪಕ್ಕದ ಗುಡ್ಡದ ನೀರು ಹರಿದು ಆಸ್ಪತ್ರೆ ನೆಲ ಮಹಡಿ ಹೊಕ್ಕು ಅವಾಂತರ ಸೃಷ್ಟಿಸಿದೆ. ಸೋಮವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ವರುಣ ಅಬ್ಬರಿಸ್ತಿದ್ದಾನೆ‌‌. ಅದ್ರಲ್ಲೂ ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಆಗಿತ್ತು ಸೋಮವಾರ ರಾತ್ರಿಯಿಂದ್ಲೆ ಡ್ರಗ್ ಗೋಡೌನ್ ನಲ್ಲಿ ನೀರು ತುಂಬಿಕೊಳ್ತಿತ್ತು..

ಈ ವರೆಗೂ ಸುಮಾರು ಮೂರು ಫೀಟ್ ನಷ್ಟು ನೀರು ಸಂಗ್ರಹವಾಗಿದೆ. ಜಿಮ್ಸ್ ಆಸ್ಪತ್ರೆಯ ಅಂಡರ್ ಗ್ರೌಂಡ್ ನಲ್ಲಿ ಮೇನ್ ಡ್ರಗ್ ಸ್ಟೋರ್ ಹೌಸ್ ಮಾಡಲಾಗಿತ್ತು.ಜಿಮ್ಸ್ ಆಸ್ಪತ್ರೆಗೆ ಬೇಕಾದ ಸುಮಾರು ನಾಲ್ಕು ಕೋಟಿ ರೂಪಾಯಿ‌ ಮೊತ್ತದ ಎಲ್ಲಾ ರೀತಿಯ ಔಷಧ ಉಪಕರಣಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಹುತೇಕ ಔಷಧ ಹಾಳಾಗಿದೆ. ಈ ಮುಂಚೆನು ಮಳೆ ಆದಾಗ ಔಷಧ ನಾಶವಾಗಿರಬಹದು ಎನ್ನುವ ಸಂಶಯ ಎಲ್ಲರನ್ನು ಕಾಡುತ್ತದೆ ಇದರ ನೇರ ಹೊಣೆಯನ್ನ ಯಾರು ಹೊರುತ್ತಾರೆ ?

ಸುಮಾರು ನಾಲ್ಕೈದು ಅಡಿಯಷ್ಟು ನೀರು ಸಂಗ್ರಹಣೆ ಈ ಜಿಮ್ಸ್​ ಆಸ್ಪತ್ರೆಯಲ್ಲಿ ಸಂಗ್ರಹಣೆಯಾಗಿದ್ದು, ಪಂಪ್ಸೆಟ್ ಮೂಲಕ ನೀರು ಹೊರತೆಗೆದು ಅದರಲ್ಲಿ ಔಷಧ ಹೊರಗಡೆ ಶಿಫ್ಟ್ ಮಾಡಲಾಗ್ತಿದೆ. ರೋಗಿಗಳಿಗೆ ಬಹುತೇಕ ಔಷಧಗಳ ಕೊರತೆ ಆಗಿದೆ. ಮಳೆ ಅವಾಂತರದಿಂದ ರೋಗಿಗಳು, ಸಿಬ್ಬಂದಿಗಳು ನರಳಾಡುವಂತಾಗಿದೆ.

ವೈದ್ಯರು ಬರೆದುಕೊಟ್ಟ ಔಷಧಿಯಲ್ಲಿ ಅರ್ಧದಷ್ಟು ಔಷಧಿಯನ್ನ ಮಾತ್ರ ಜಿಮ್ಸ್ ನಲ್ಲಿ ಕೊಡಗತಾರೆ ಅನ್ನೋ ಆರೋಪ ಹಿಂದಿನಿಂದ ಇತ್ತು.. ವೈದ್ಯರನ್ನ ಕೇಳಿದ್ರೆ ಔಷಧಿ ಕೊರತೆ ಇದೆ ಅನ್ನೋ ರಾಗವನ್ನ ಎಳೀತಿದ್ರು.‌ ಈಗ ಔಷಧಿ ಗೋಡಾವನ್ ನೀರು ತುಂಬಿದ್ದು, ಔಷಧಿ ಕೊರತೆಯಾಗ್ದಂತೆ ಯಾವ ರೀತಿ ನಿಭಾಯಿಸ್ತಾರೆ ಅನ್ನೋದು ಈಗಿನ ಪ್ರಶ್ನೆ. ?ಔಷಧ ಹಾನಿಯನ್ನು ಯಾರು ತುಂಬುತ್ತಾರೆ ? ಎಂದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *