ಹಳ್ಳದಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದ ಇನ್ನೊಬ್ಬ ಪೋಲಿಸ್ ಪೇದೆಯ ಶವ ಪತ್ತೆ

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇಲ್ಲಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಮಹೇಶ್ ಹಾಗೂ ನಿಂಗಪ್ಪ ಅವರನ್ನು ಕಳುಹಿಸಲಾಗಿತ್ತು. ಪ್ರತಿಭಟನೆ ಮುಕ್ತಾಯದ ನಂತರ ವಾಪಸ್ಸಾಗುತ್ತಿದ್ದ ವೇಳೆ ಇಬ್ಬರು ಸೋಮವಾರ ತಡರಾತ್ರಿ ಹಳದಲ್ಲಿ ಹರಿಯುತ್ತಿದ್ದ ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದರು

ನಿಂಗಪ್ಪ ಹಲವಾಗಲಿ ( 29 ) ಎಂಬಾತನ ಶವ ಯಲಬುರ್ಗಾ ತಾಲೂಕಿನ ಸಂಗನಾಳ ಚೆಕ್ ಡ್ಯಾಂ ಬಳಿ ನಿನ್ನೆ ಪತ್ತೆಯಾಗಿತ್ತು ಆದರೆ ಘಟನಾ ಸ್ಥಳದಿಂದ ಸುಮಾರು ಆರು ಕಿಮೀ ನಷ್ಟು ದೂರಕ್ಕೆ ಮಹೇಶ್ ವಕ್ರದ (31) ಎಂಬಾತನ ಶವ ಇಂದು ಯಲಬುರ್ಗಾ ತಾಲೂಕಿನ ಸಂಗನಾಳ ಬಳಿ ಇರುವ ಸೇತುವೆ ಕೆಳಗೆ ಶವ ಸಿಕ್ಕಿದೆ . ನಿನ್ನೆಯಿಂದಲೂ ಕೊಪ್ಪಳ ಜಿಲ್ಲೆಯ ಪೊಲೀಸರು , ಗದಗ ಜಿಲ್ಲೆಯ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು . ನಿನ್ನೆಯಿಂದ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಖುದ್ದು ಕಾರ್ಯಾಚರಣೆ ಸ್ಥಳದಲ್ಲಿಯೇ ಇದ್ದರು.

Leave a Reply

Your email address will not be published. Required fields are marked *