ನಾಪತ್ತೆಯಾಗಿದ್ದ ಇಬ್ಬರ ಪೋಲಿಸರಲ್ಲಿ ನಿಂಗಪ್ಪ ಹಲವಾಗಲಿ ಶವ ಪತ್ತೆ .

ಗದಗ : ಗದಗ ಜಿಲ್ಲೆಯ ಗಜೇಂದ್ರ ಗಡದಲ್ಲಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇಲ್ಲಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಮಹೇಶ್ ಹಾಗೂ ನಿಂಗಪ್ಪ ಅವರನ್ನು ಕಳುಹಿಸಲಾಗಿತ್ತು. ಪ್ರತಿಭಟನೆ ಮುಕ್ತಾಯದ ನಂತರ ವಾಪಸ್ಸಾಗುತ್ತಿದ್ದ ವೇಳೆ ಇಬ್ಬರು ಸೋಮವಾರ ತಡರಾತ್ರಿ ಹಳದಲ್ಲಿ ಹರಿಯುತ್ತಿದ್ದ ನೀರಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ನಿಂಗಪ್ಪ ಹಲವಾಗಲಿ ( 29 ) ಎಂಬಾತನ ಶವ ಯಲಬುರ್ಗಾ ತಾಲೂಕಿನ ಸಂಗನಾಳ ಚೆಕ್ ಡ್ಯಾಂ ಬಳಿ ಪತ್ತೆಯಾಗಿದೆ . ಘಟನಾ ಸ್ಥಳದಿಂದ ಸುಮಾರು ಮೂರು ಕಿಮೀ ನಷ್ಟು ದೂರಕ್ಕೆ ನಿಂಗಪ್ಪನ ಶವ ಪತ್ತೆಯಾಗಿದೆ . ಬೈಕ್ ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ . ಹೆಲ್ಮಟ್ , ಬೈಕ್ ನ ಸೈಡ್ ಕವರ್ ಮಾತ್ರ ಸಿಕ್ಕಿವೆ ಎಂದು ಹೇಳಲಾಗುತ್ತದೆ. ಸದ್ಯ ಶೋಧಕಾರ್ಯ ಮುಂದುವರೆದಿದೆ.

ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು , ಕೊಪ್ಪಳ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು . ನರೇಗಲ್ ಪೊಲೀಸರು , ಯಲಬುರ್ಗಾ , ಕುಕನೂರು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ . ನಾಪತ್ತೆಯಾಗಿರುವ ಮಹೇಶನಿಗಾಗಿ ತೀವ್ರ ಶೋಧ ಮುಂದುವರಿದಿದೆ.

Leave a Reply

Your email address will not be published. Required fields are marked *