ನಿರಂತರ ಮಳೆಗೆ ಮನೆ ಕುಸಿತ ; ಓರ್ವ ಮಹಿಳೆಗೆ ಗಾಯ ,ಮಕ್ಕಳಿಬ್ಬರು ಪಾರು

ಗದಗ : ಜಿಲ್ಲೆಯಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಡವಿಸೋಮಾಪೂರ ಗ್ರಾಮದ ಇಮಾಮಸಾಬ ಕಂಪ್ಲಿ ಇವರ ಮನೆ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಸೈನಾಜ ಕಂಪ್ಲಿ ಎನ್ನುವರಿಗೆ ತಲೆಗೆ ಕಲ್ಲು ಬಿದ್ದು ಗಾಯವಾಗಿದೆ.

ಮನೆಯಲ್ಲಿ ಎರಡು ಮಕ್ಕಳಿದ್ದರು ಯಾವುದೇ ರೀತಿ ತೊಂದರೆ ಆಗಿಲ್ಲ ಇಂದು ಸಾಂಯಕಾಲ ಜಾವ ಮನೆಯವರು ಅಡುಗೆ ಮಾಡುತ್ತಿರುವ ಸಮಯದಲ್ಲಿ ಜೋರಾಗಿ ಮಳೆಯಾಗಿದ್ದು ಒಳಮನೆಯ ಗೊಡೆ ಕುಸಿದು ಬಿದ್ದಿದೆ. ತಕ್ಷಣ ಮನೆಯವರು ಎದ್ದು ಹೊರಬಂದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಮಸುಂದರ ಡಂಬಳ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪರಿಹಾರ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *