ಗದಗ : ಬಸ್- ಬೈಕ್ ನಡುವೆ ಅಪಘಾತ : ಬೈಕ್ ಹಿಂಬದಿ ಸವಾರ ಸಾವು , ಹಲವರಿಗೆ ಗಾಯ

ಗದಗ: ಬಸ್- ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರ ಸಾವಿಗೀಡಾಗಿ, ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಹೊಂಬಳ ಗದಗ ರಸ್ತೆಯಲ್ಲಿ ಬುಧವಾರ ನಡೆದಿದೆ.

ತಾಲೂಕಿನ ಲಿಂಗದಾಳ ಗ್ರಾಮದ ಹನುಮಂತಪ್ಪ ಚಲವಾದಿ(47) ಮೃತಪಟ್ಟಿದ್ದಾರೆ.ಬೈಕ್ ಸವಾರರು ಲಿಂಗದಾಳ ಗ್ರಾಮದಿಂದ ಗದಗ ನಗರಕ್ಕೆ ಹಾಗೂ ಗದಗದಿಂದ ಹೊಂಬಳ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ನ ಚಕ್ರದಡಿ ಸಿಲುಕಿದ ಬೈಕ್ ಹಿಂಬದಿ ಸವಾರ ಮೃತಪಟ್ಟರೆ, ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ ಗುಂಡಿಗೆ ಉರುಳಿದೆ.

ಬೈಕ್ ಚಲಾಯಿಸುತ್ತಿದ್ದ ರೋಹಿತ್ ಚಲವಾದಿ ಹಾಗೂ ಬಸ್ ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *