Thursday, June 13, 2024
Google search engine
Homeಅಪಘಾತಗದಗ : ಟಿಪ್ಪರ್-ಬೈಕ್ ಡಿಕ್ಕಿ: ತುಂಡಾಗಿ ರಸ್ತೆ ಮೇಲೆ‌ ಬಿದ್ದ ಬೈಕ್ ಸವಾರನ ಕಾಲು!

ಗದಗ : ಟಿಪ್ಪರ್-ಬೈಕ್ ಡಿಕ್ಕಿ: ತುಂಡಾಗಿ ರಸ್ತೆ ಮೇಲೆ‌ ಬಿದ್ದ ಬೈಕ್ ಸವಾರನ ಕಾಲು!

ಗದಗ : ಟಿಪ್ಪರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರನ ಕಾಲು ತುಂಡಾಗಿ ಬಿದಿದ್ದೆ, ಇವನಿಗೆ ಗಂಭೀರವಾಗಿ ಗಾಯಗಳಾಗಿವೆ. ಇನ್ನೋರ್ವನಿಗೆ ಗಾಯಗಳಾಗಿದ್ದು ಘಟನೆ ನಗರದ ಹೊರವಲಯದ ಅಂಜುಮನ್ ಕಾಲೇಜು ಹತ್ತಿರ ಈ ಅಪಘಾತ ಸಂಭವಿಸಿದೆ.

ಬೈಕ್ ಮೇಲೆ ಇಬ್ಬರು ಹೊರಟಿದ್ದರು ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಟಿಪ್ಪರ್ ಚಕ್ರದಡಿ ಸಿಲುಕಿ ಬೈಕ್ ಸವಾರನಿಗೆ ಕಾಲು ತುಂಡಾಗಿದೆ ಎಂದು ತಿಳಿದುಬಂದಿದೆ.

ವಿನೋದ್ ಹುಡೆದ್ (22) ಹಾಗೂ ಮಂಜುನಾಥಗೌಡ ಬರಮಗೌಡ್ರ (23) ಗಾಯಾಳು ಬೈಕ್ ಸವಾರರು. ಗದಗ ತಾಲೂಕಿನ ಹರ್ತಿ ಗ್ರಾಮದ ನಿವಾಸಿಗಳು.

ಇವರಿಬ್ಬರು ಹೊಸ ಬೈಕ್ ಲೈಸೆನ್ಸ್ ಮಾಡಿಸಲು ಆರ್ ಟಿಓ ಕಚೇರಿಗೆ ಬರುತ್ತಿದ್ದರು. ಆರ್ ಟಿಓ ಕ್ರಾಸ್ ಬಳಿ ಹೆಲ್ಮೆಟ್ ಹಾಕಿಕೊಳ್ಳಲು ಏಕಾಏಕಿ ಬೈಕ್ ವೇಗ ಕಡಿಮೆ ಮಾಡಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.ಎನ್ನಲಾಗಿದೆ.

ಕಾಲು ಕಳೆದುಕೊಂಡ ವಿನೋದ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments