Thursday, June 13, 2024
Google search engine
Homeಶಿಕ್ಷಣಉದ್ಯೋಗಗದಗ : ಸರ್ಕಾರಿ ಐಟಿಐ ಕಾಲೇಜು ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ 

ಗದಗ : ಸರ್ಕಾರಿ ಐಟಿಐ ಕಾಲೇಜು ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ 

ಗದಗ ಮೇ 21 : ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅಗಷ್ಟ-2024ನೇ ಶೈಕ್ಷಣಿಕ ಸಾಲಿಗೆ ಮೆರಿಟ್-ಕಂ-ರಿಸರ್ವೇಷನ್ ಆಧಾರಿತ ಪ್ರವೇಶಗಳನ್ನು ಆನ್‍ಲೈನ್ ಮುಖಾಂತರ ವೃತ್ತಿಯ ಅನುಸಾರ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣರಾದ/8ನೇ ತರಗತಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಸರಕಾರಿ ಮತ್ತು ಅನುದಾನಿತ ಐ.ಟಿ.ಐ ಗಳಲ್ಲಿ ಎನ್.ಸಿ.ವಿ.ಟಿ ಸಂಯೋಜಿತ ಸಿಟಿಎಸ್ ಯೋಜನೆ ಅಡಿಯಲ್ಲಿರುವ ಇಂಜನೀಯರಿಂಗÀ ಹಾಗೂ ನಾನ್ ಇಂಜನೀಯರಿಂಗ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಇಲಾಖೆಯ ವೆಬ್ ಸೈಟ್ www.cite.karnataka.gov.in ಮೂಲಕ ಅಥವಾ ಐ.ಟಿ.ಐ ಗಳಲ್ಲಿರುವ ಹೆಲ್ಪಡೆಸ್ಕ ಮುಖಾಂತರ ಅನ್‍ಲೈನ್ ಅರ್ಜಿಗಳನ್ನು ಜೂನ್ 3 ರೊಳಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಗದಗ ಜಿಲ್ಲೆಯ 9 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹಾಗೂ 7 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆನ್ ಲೈನ್ ಮುಖಾಂತರ ಪ್ರವೇಶವನ್ನು ಪಡೆಯಬಹುದಾಗಿದೆ. ಗದಗ ಜಿಲ್ಲೆಯ 9 ಸರಕಾರಿ ಐ.ಟಿ.ಐ ಗಳು: ಸರಕಾರಿ ಐ.ಟಿ.ಐ(ಮಹಿಳಾ), ಬೆಟಗೇರಿ-ಗದಗ, ಸರಕಾರಿ ಐ.ಟಿ.ಐ, ಮುಂಡರಗಿ, ಸರಕಾರಿ ಐ.ಟಿ.ಐ ನರಗುಂದ, ಸರಕಾರಿ ಐ.ಟಿ.ಐ ಶಿರಹಟ್ಟಿ, ಸರಕಾರಿ ಐ.ಟಿ.ಐ, ಸೂಡಿ ತಾ. ಗಜೇಂದ್ರಗಡ, ಸರಕಾರಿ ಐ.ಟಿ.ಐ ಹೊಂಬಳ ತಾ: ಗದಗ, ಸರಕಾರಿ ಐ.ಟಿ.ಐ ಸೊರಟೂರ ತಾ: ಗದಗ, ಸರಕಾರಿ ಐ.ಟಿ.ಐ ಕುರ್ತಕೋಟಿ ತಾ: ಗದಗ, ಸರಕಾರಿ ಐ.ಟಿ.ಐ ಯಾವಗಲ್ ತಾ. ರೋಣ ಜಿಲ್ಲೆಯ 7 ಅನುದಾನಿತ ಐ.ಟಿ.ಐ ಗಳು: ಸರ್. ಸಿದ್ದಪ್ಪ ಕಂಬಳಿ ಅನುದಾನಿತ ಐ.ಟಿ.ಐ, ಮುಂಡರಗಿ ರೋಡ, ಗದಗ. ಶ್ರೀ ಜಗದ್ಗುರು ತೋಟದಾರ್ಯ ಅನುದಾನಿತ ಐ.ಟಿ.ಐ ಡಂಬಳ ತಾ:ಮುಂಡರಗಿ. ಬಾಪೂಜಿ ಅನುದಾನಿತ ಐ.ಟಿ.ಐ, ಲಕ್ಷೇಶ್ವರ ತಾ ಶಿರಹಟ್ಟಿ, ಸಂಜಯ ಗ್ರಾಮೀಣ ವಿದ್ಯಾ ಸಂಸ್ಥೆಯ ಅನುದಾನಿತ ಐ.ಟಿ.ಐ, ಹೊಳೆ-ಆಲೂರ ತಾ. ರೋಣ. ಶ್ರೀ ಜಗದ್ಗುರು ಅನ್ನದಾನೇಶ್ವರ ಅನುದಾನಿತ ಐ.ಟಿ.ಐ, ಗಜೇಂದ್ರಗಡ ತಾ. ರೋಣ, ಶ್ರೀ ಕೊಟ್ಟೂರ ಸ್ವಾಮಿ ಅನುದಾನಿತ ಐ.ಟಿ.ಐ, ನರೇಗಲ್ಲ ತಾ. ರೋಣ. ಶ್ರೀ ಮಾದಾರ ಚನ್ನಯ್ಯ ಅನುದಾನಿತ ಐ.ಟಿ.ಐ, ಶಿರೋಳ ತಾ. ನರಗುಂದ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಐ.ಟಿ.ಐ ಗಳ ಪ್ರಾಚಾರ್ಯರನ್ನು ಅಥವಾ ಇಲಾಖೆಯ ವೆಬ್ ಸೈಟಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಐ.ಟಿ.ಐ ಗದಗ ಪ್ರಾಚಾರ್ಯ/ನೋಡಲ್ ಅಧಿಕಾರಿಯಾದ ಡಾ. ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments