Thursday, June 13, 2024
Google search engine
Homeಶಿಕ್ಷಣಉದ್ಯೋಗಗದಗ : ಅಂತರಾಜ್ಯ ಕಳ್ಳನ ಬಂಧನ ; 425000 ರೂ ಗಳ 85 ಗ್ರಾಂ...

ಗದಗ : ಅಂತರಾಜ್ಯ ಕಳ್ಳನ ಬಂಧನ ; 425000 ರೂ ಗಳ 85 ಗ್ರಾಂ ತೂಕದ ಬಂಗಾರದ ಆಭರಣಗಳ ವಶ !

ಗದಗ : ಬೆಟಗೇರಿ ಪಟ್ಟಣದ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನದ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರು ಅಂತರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫೆಬ್ರವರಿ 10 – 2024 ರಂದು ಗದಗ ಬೆಟಗೇರಿ ಪಟ್ಟಣದ ಬಸವೇಶ್ವರ ನಗರ, ಕಣಗಿನಹಾಳ ರಸ್ತೆ ೪ ನೇ ಕ್ರಾಸ್ ನಲ್ಲಿ ಷಣ್ಮುಖಪ್ಪ ತಂದೆ ಬ್ರಹ್ಮಾನಂದಪ್ಪ ಹೆಳವಿ ಇವರ ಮನೆಯಲ್ಲಿ ಕಳ್ಳತನ ನಡೆದಿತ್ತು.

ಬೆಟಗೇರಿ ಪೋಲಿಸ್ ಠಾಣೆಯಲ್ಲಿ ಗುನ್ನಾ ನಂಬರ: ೧೨/೨೦೨೪ ಕಲಂ:೪೫೭, ೩೮೦ ಐಪಿಸಿ ಪ್ರಕರಣವನ್ನು ದಿನಾಂಕ: ೧೦/೦೨/೨೦೨೪ ರಂದು ದಾಖಲಿಸಿಕೊಂಡು ತನಿಖೆ ಕೈಗೊಳಲಾಗಿತ್ತು.

ಮಾನ್ಯ ಶ್ರೀ ಬಿ.ಎಸ್. ನೇಮಗೌಡ ಪೊಲೀಸ್ ಅಧೀಕ್ಷಕರು ಗದಗ ರವರು ಹಾಗೂ ಶ್ರೀ ಎಂ.ಬಿ.ಸಂಕದ ಹೆಚ್ಚುವರಿ ಪೊಲೀಸ್ ಅಧೀಕ ್ಷಕರು ಗದಗ ರವರು ಹಾಗೂ ಶ್ರೀ ಜೆ.ಹೆಚ್. ಇನಾಮದಾರ ಉಪ-ಅಧಿಕ್ಷಕರು ಗದಗ ಉಪ ವಿಭಾಗ ಹಾಗೂ ಪ್ರಭುಗೌಡ ಕಿರೇದಳ್ಳಿ ಡಿ.ಎಸ್.ಪಿ ನರಗುಂದ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ.

ಶ್ರೀ ಧೀರಜ್ ಶಿಂಧೆ, ಸಿಪಿಐ ಬೆಟಗೇರಿ ವೃತ್ತ ಹಾಗೂ ಶ್ರೀಸಂಗಮೇಶ. ವ್ಹಿ. ಶಿವಯೋಗಿ, ಪಿ.ಐ. ಮುಳಗುಂದ ಪೊಲೀಸ್ ಠಾಣೆ ಹಾಗೂ ಶ್ರೀಮತಿ ಡಿ. ಚಾಮುಂಡೇಶ್ವರಿ ಪಿ.ಎಸ್.ಐ. ಮತ್ತು ಸಿಬ್ಬಂದಿ ಜನರಾದ ಶ್ರೀ ಬಿ.ಎಫ್. ಯರಗುಪ್ಪಿ, ಎ.ಎಸ್.ಐ ಶ್ರೀ ಎಸ್.ಎ. ಗುಡ್ಡಿಮಠ, ಸಿಹೆಚ್.ಸಿ, ಐ.ಎ.ಮಿರ್ಜಾ ಸಿ.ಹೆಚ್.ಸಿ, ಎಂ.ಎಸ್. ಗಾಣಿಗೇರ ಸಿಪಿಸಿ, ಎಸ್.ಡಿ.ಬಳ್ಳಾರಿ ಸಿಪಿಸಿ, ಎಂ.ಎಫ್. ಅಸೂಟಿ ಸಿಪಿಸಿ-, ಸಿ.ಎನ್. ಮಾದರ ಸಿಪಿಸಿ, ಪಿ.ಹೆಚ್. ದೊಡ್ಡಮನಿ, ಸಿಪಿಸಿ, ರಾಕೇಶ ಸಿಪಿಸಿ, ಎಲ್.ಬಿ. ಪೂಜಾರ ಸಿಪಿಸಿ ಜ್ಯೋತಿ ಚವ್ಹಾಣ ಮ.ಪಿ.ಸಿ-ಹಾಗೂ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿಯವರಾದ ಶ್ರೀ ಗುರುರಾಜ ಬೂದಿಹಾಳ ಎ.ಆರ್.ಎಸ್.ಐ ಹಾಗೂ ಎಸ್.ಸಿ. ಕೊರಡೂರ ಸಿಪಿಸಿ ಅವರನ್ನೊಳಗೊಂಡ ತಂಡ ಅಂತರರಾಜ್ಯ ಮನೆ ಕಳ್ಳನನ್ನು ಪತ್ತೆ ಮಾಡಲು ಯಶಸ್ವಿಯಾಗಿದೆ.

ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನಾ ನಂಬರ ೧೨/೨೦೨೪ ಕಲಂ ೪೫೭,೩೮೦ ಐಪಿಸಿ ನೇ ಪ್ರಕರಣದಲ್ಲಿ ಬಂಧನದಲ್ಲಿದ್ದ ಆರೋಪಿತನಾದ ಸುರೇಶ ತಂದೆ ಯಲ್ಲಪ್ಪ ಶಿಪರಿ @ ಶಿವಪೂರಿ ಸಾ|| ಶಾಂತಿನಗರ, ಸೊಲ್ಲಾಪೂರ ರಾಜ್ಯ: ಮಹಾರಾಷ ್ಟç ಇತನನ್ನು ವಶಕ್ಕೆ ಪಡೆದು ಅವನಿಂದ ಬೆಟಗೇರಿ ಪೊಲೀಸ್ ಠಾಣೆಯ

ಗುನ್ನಾ ನಂಬರ ೧೨/೨೦೨೪ ಕಲಂ: ೪೫೭, ೩೮೦ ಐಪಿಸಿ ನೇದ್ದರಲ್ಲಿ ಕಳುವಾಗಿದ್ದ ೪,೨೫,೦೦೦/- ರೂ ಗಳ ಕಿಮ್ಮತ್ತಿನ ೮೫ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಈ ಮನೆ ಕಳ್ಳತನದ ಪತ್ತೆ ಕಾರ್ಯವನ್ನು ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಬಿ.ಎಸ್.

ನೇಮಗೌಡ, ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರು ಶ್ಲಾಘಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments