Thursday, June 13, 2024
Google search engine
Homeಆರೋಗ್ಯಗದಗ : ಮೃತ ಮಕ್ಕಳ ಪಾಲಕರಿಗೆ ಸಾಂತ್ವಾನ : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ...

ಗದಗ : ಮೃತ ಮಕ್ಕಳ ಪಾಲಕರಿಗೆ ಸಾಂತ್ವಾನ : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಧ್ಯಸರು

ಗದಗ : ಇತ್ತೀಚೆಗೆ ವಿಜಯಪುರದಲ್ಲಿ ಜರುಗಿದ ದುರ್ಘಟನೆಯಲ್ಲಿ ಗದಗ ನಗರದ ಇಬ್ಬರು ಮಕ್ಕಳು ಮೃತರಾಗಿದ್ದರು.

ಶುಕ್ರವಾರ ಮೃತರಾದ ಮಕ್ಕಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ನಂತರ ಅವರು ನಗರದ ಬೀಷ್ಮಕೆರೆ ವೀಕ್ಷಿಸಿ, ಸಾರ್ವಜನಿಕರ ಹಿತದೃಷಿಯಿಂದ ಕೆರೆ ಸುತ್ತಲು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಮುಂದಾಗಬೇಕು ಎಂದರು.

ಪ್ರಕರಣ ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಮೂವರು ಮಕ್ಕಳ ಶವ ಪತ್ತೆಯಾಗಿತ್ತು.ವಿಜಯಪುರ : ನಗರದ ಹೊರವಲಯದ ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಮಕ್ಕಳು ಸೋಮವಾರ ಶವವಾಗಿ ಪತ್ತೆಯಾಗಿದ್ದು, ಗಿಡಗಳಲ್ಲಿ ಸಿಲುಕಿಕೊಂಡಿದ್ದ ಅವರ ಶವಗಳನ್ನು ವಶಕ್ಕೆ ಪಡೆಯಲಾಗಿದೆ.

ಮೃತರನ್ನು ಅನುಷ್ಕಾ ದಹಿಂದೆ (9), ವಿಜಯ್ ದಹಿಂದೆ (7) ಸಹೋದರ ಮತ್ತು ಮಿಹಿರ್ ಜನಗೌಲಿ (7) ಎಂದು ಗುರುತಿಸಲಾಗಿದೆ. ಮೊದಲ ಇಬ್ಬರು ಮಕ್ಕಳು ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಗದಗ ಜಿಲ್ಲೆಯ ನಿವಾಸಿಗಳಾಗಿದ್ದರೆ, ಮತ್ತೊಬ್ಬರು ವಿಜಯಪುರ ನಗರದ ನಿವಾಸಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments