Thursday, June 13, 2024
Google search engine
Homeಶಿಕ್ಷಣಉದ್ಯೋಗಗದಗ : ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ.!

ಗದಗ : ಬೆಳೆ ವಿಮೆ ಹಾಗೂ ಬೆಳೆ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ.!

ಗದಗ : ಜಿಲ್ಲೆಯ ರೈತರಿಗೆ ಇದುವರೆಗೆ ಕಳೆದ ವರ್ಷ ತುಂಬಿದ ಬೆಳೆವಿಮಾ ಹಣವು ಬಂದಿರುವದಿಲ್ಲ ೭ ದಿನದ ಒಳಗೆ ಜಿಲ್ಲೆಯ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಹಾಕಿಸಬೇಕು ಮತ್ತು ಒಂದು ವಾರದಲ್ಲಿ ಬೆಳೆ ವಿಮಾ ಹಣ ತುಂಬಿದ ರೈತರಿಗೆ ವಿಮಾ ಪರಿಹಾರದ ಹಣ ಜಮೆ ಮಾಡಬೇಕು. ಇಲ್ಲದೇ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ಮಾಡಲಾಗುವುದು ಎಂದು ರೈತ ಹಿತಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಹಿತಾಭಿವೃದ್ಧಿ ಸಂಘದ ಗದಗ ಜಿಲ್ಲಾಧ್ಯಕ್ಷ ಕರಬಸಯ್ಯ ನಾಲ್ವತ್ವಾಡಮಠ ಅವರು ಮಾತನಾಡಿ, ಪಕ್ಕದ ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ರೈತರಿಗೆ ಬೆಳೆ ವಿಮಾ ಪರಿಹಾರದ ಹಣವು ರೈತರ ಖಾತೆಗೆ ಜಮೆ ಆಗಿ ತಿಂಗಳಾದರೂ ನಮ್ಮ ಜಿಲ್ಲೆಯ ರೈತರಿಗೆ ಏಕೆ ಹಣ ಜಮೆ ಆಗಿರುವುದಿಲ್ಲ. ಕೂಡಲೇ ವಿಮಾ ಹಣ ರೈತರ ಬ್ಯಾಂಕ ಖಾತೆಗೆ ಹಾಕುವಂತೆ ಮತ್ತು ಜಿಲ್ಲೆಯ ರೈತರಿಗೆ ೨೫% ರೈತರ ಖಾತೆಗೆ ಬೆಳೆ ಪರಿಹಾರದ ಹಣ ಹಾಕಿದ್ದೀರಿ ಕಾರಣ ಕೇಳಿದರೆ ನಿಮ್ಮ ಎಫ್.ಐ.ಡಿ. ಆಗಿಲ್ಲ, ಆಧಾರ ಕಾರ್ಡ ಸರಿ ಇಲ್ಲಾ ಎಂದು ಸುಳ್ಳು ಸಬೂಬ ಹೇಳುತ್ತಿದ್ದು, ರೈತರು ಕೃಷಿ ಇಲಾಖೆ, ತಹಶಿಲ್ದಾರರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಬ್ಯಾಂಕಿಗೆ ಅಲೆದಾಡುವ ಪರಸ್ಥಿತಿ ನಿರ್ಮಾಣ ಆಗಿದೆ ಆದ್ದರಿಂದ ಈ ಕೂಡಲೇ ರೈತರ ಖಾತೆಗೆ ಹಣ ಹಾಕಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಹಿತಾಭಿವೃದ್ಧಿ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಜಂತ್ಲಿ, ರೈತ ಮುಖಂಡರುಗಳಾದ ಬಸವರಾಜ ಕವಳಿಕಾಯಿ,ವಿ.ಎಚ್. ದೇಸಾಯಿಗೌಡ್ರ, ಬಸಪ್ಪ ಕಲಬಂಡಿ, ವಿರೂಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಮೋಹನ ಇಮರಾಪೂರ, ಮಲ್ಲಪ್ಪ ಬಳ್ಳಾರಿ, ಬಸವರಾಜ ಹುಬ್ಬಳ್ಳಿ, ನರಸಪ್ಪ ತುಕ್ಕಪ್ಪನವರ, ವಿರುಪಾಕ್ಷಪ್ಪ ಹೆಬ್ಬಳ್ಳಿ, ಕಳಕಪ್ಪ ರೇವಡಿ, ಪರಪ್ಪ ಕಮತರ, ಫಕ್ಕಿರಗೌಡ ಪಾಟೀಲ, ಮಂಜುನಾಥ ಕೋಳಿವಾಡ, ಸತೀಶ ಗಿಡ್ಡಹನಮಣ್ಣವರ, ಮುತ್ತಪ್ಪ ಜಡಿ, ಉಮೇಶ ಲಿಂಗರಡ್ಡಿ, ಬಸವರಾಜ ಮೊರಬದ, ಇಮಾಮ ಹುಸೇನ್ ಚಿನ್ನೂರ, ರುದ್ರಯ್ಯ ಹಿರೇಮಠ, ಈರಣ್ಣ ಗಡಗಿ, ವೀರುಪಾಕ್ಷಪ್ಪ ಕಳಸದ, ಮಂಜುನಾಥ ಹಿತ್ತಲಮನಿ, ಅಶೋಕ ಪೋರ್ಬಿ, ಮಂಜುನಾಥ ಕುಡಗಿ ಸೇರಿದಂತೆ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments