Thursday, June 13, 2024
Google search engine
Homeಶಿಕ್ಷಣಉದ್ಯೋಗಗದಗ : ಎರಡು ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಗದಗ : ಎರಡು ಸರಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಗದಗ : ಎರಡು ಸರಗಳ್ಳತನ ಪ್ರಕರಣಗಳನ್ನು ಭೇಧಿಸಿರುವ ಬೆಟಗೇರಿ ಪೊಲೀಸರು ಓರ್ವ ಬಾಲಕನನ್ನು ಬಂಧಿಸಿದ್ದು, ಬಂಧಿತನಿಂದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನಾ ನಂಬರಗಳಾದ ೧] ೧೫/೨೦೨೪ ಕಲಂ: ೩೯೨ ಐಪಿಸಿ ೨] ೧೬/೨೦೨೪ ಕಲಂ: ೩೯೨ ಐಪಿಸಿ ನೇ

ಪ್ರಕರಣಗಳಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ದಿನಾಂಕ: ೧೬/೦೫/೨೦೨೪ ರಂದು ವಶಕ್ಕೆ

ಪಡೆದು ಅವನಿಂದ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಒಕ್ಕಲಗೇರಿ ಓಣಿ ಹಾಗೂ ಕಬಾಡಿ ರಸ್ತೆಯ ಆಶ್ವಿನಿ

ಆಸ್ಪತ್ರೆ ಹತ್ತಿರ ಪರ‍್ಯಾಧಿದಾರರ ಮನೆಯ ಹತ್ತಿರ ಮೋಟರಸೈಕಲ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ

ಮಾತನಾಡಿಸುತ್ತಾ ಪರ‍್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕೊರಳಲಿದ್ದ ಸರಗಳನ್ನು ಕಿತ್ತುಕೊಂಡು ಹೋಗಿದ್ದು,

ಆ ಪೈಕಿ ಗುನ್ನಾ ನಂಬರ ೧೫/೨೦೨೪ ಕಲಂ: ೩೯೨ ಐಪಿಸಿ ರಲ್ಲಿ

೧] ಒಂದು ಕರಿಮಣಿಗಳುವಿರುವ ಬಂಗಾರದ ಮಾಂಗಲ್ಯ ಸರ ೨೦ ಗ್ರಾಂ ೩೦ ಮೀಲಿ ಗ್ರಾಂ ಅ:ಕಿ:೮ ೦,೦೦೦/-

೨] ಒಂದು ಬಂಗಾರದ ಗುಂಡಿನ ಸರ ೨ ಗ್ರಾಂ ಅ:ಕಿ: ೨೦.೦೦೦/-ರೂಗಳು

ಹಾಗೂ ಬೆಟಗೇರಿ ಠಾಣೆಯ ಗುನ್ನಾ ನಂಬರ ೧೬/೨೦೨೪ ಕಲಂ: ೩೯೨ ಐಪಿಸಿ ನೇದ್ದರಲ್ಲಿ ಕಿತ್ತುಕೊಂಡು

ಹೋದ ವಸ್ತುಗಳಾದ-೧] ಒಂದು ಕರಿಮಣಿಗಳುವಿರುವ ಸ್ವಸ್ತಿಕ್ ಲಾಕೇಟ್ ಇರುವ ಬಂಗಾರದ ಸರ ೧೧ ಗ್ರಾಂ ಅ:ಕಿ: ೫೦,೦೦೦/-ರೂಗಳು ಹೀಗೆ ಒಟ್ಟು ೧,೫೦,೦೦೦/-ರೂಗಳ ಕಿಮ್ಮತ್ತಿನ ಬಂಗಾರದ ವಸ್ತುಗಳನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಂದ ಜಪ್ತ ಮಾಡಿದ್ದಾರೆ.

ಇದರಿಂದ ಬೆಟಗೇರಿ ಪೊಲೀಸ್ ಠಾಣೆಯ 2 ಸರಗಳವು ಪ್ರಕರಣಗಳು ಪತ್ತೆ ಮಾಡಲಾಗಿದ್ದು,

ಮಾನ್ಯ ಶ್ರೀ ಬಿ.ಎಸ್. ನೇಮಗೌಡ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರು ಹಾಗೂ ಶ್ರೀ ಎಂ.ಬಿ.ಸಂಕದ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರು ಹಾಗೂ ಶ್ರೀ ಜೆ.ಹೆಚ್. ಇವರ ಇನಾಮದಾರ ಉಪ–ಅಧಿಕ್ಷಕರು ಗದಗ ಉಪ ವಿಭಾಗ ಗದಗ ರವರ ಮಾರ್ಗದರ್ಶನದಲ್ಲಿ ಶ್ರೀ ಧೀರಜ್ ಶಿಂಧೆ, ಸಿಪಿಐ ಬೆಟಗೇರಿ ವೃತ್ತ ಮತ್ತು ಶ್ರೀ ಸಂಗಮೇಶ. ವ್ಹಿ. ಶಿವಯೋಗಿ, ಪಿ.ಐ. ಮುಳಗುಂದ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಬೆಟಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ(ಕಾವಸು) ರವರಾದ ಶ್ರೀಮತಿ ನೂರಜಾನ ಸಾಬರ, ಎ.ಆರ್.ಎಸ್.ಐ ನೇದವರನ್ನೊಳಗೊಂಡ ತಂಡವನ್ನು ಪತ್ತೆ ಕುರಿತು ರಚಿಸಿ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಎಸ್.ಬಿ. ಜಾಂಬೋಟಿ. ಪಿ.ಎಸ್.ಐ (ಅ/ವಿ) ಹಾಗೂ ಸಿಬ್ಬಂದಿ ಜನರಾದ ಶ್ರೀ ಬಿ.ಎಫ್. ಯರಗುಪ್ಪಿ, ಎ.ಎಸ್.ಐ ಬೆಟಗೇರಿ ವೃತ್ತ ಕಛೇರಿ, ಶ್ರೀ ಎಸ್.ಎ. ಗುಡ್ಡಿಮಠ, ಸಿಹೆಚ್.ಸಿ. , ಐ.ಎ.ಮಿರ್ಜಾ, ಸಿ.ಹೆಚ್.ಸಿ. , ಪಿ.ಆರ್. ರಾಠೋಡ ಸಿಪಿಸಿ-, ಎಂ.ಎಸ್. ಗಾಣಿಗೇರ ಸಿಪಿಸಿ-, ಎಸ್.ಡಿ.ಬಳ್ಳಾರಿ ಸಿಪಿಸಿ-, ಎಂ.ಎಫ್. ಅಸೂಟಿ ಸಿಪಿಸಿ- ಸಿ.ಎನ್. ಮಾದರ ಸಿಪಿಸಿ- ಪಿ.ಎಸ್. ದೊಡ್ಡಮನಿ, ಸಿಪಿಸಿ-ಅಶೋಕ ಗದಗ ಸಿಪಿಸಿ-, ನಾಗರಾಜ ಭರಡಿ ಸಿಪಿಸಿ-ಹಾಗೂ ಟೆಕ್ನಿಕಲ್ ಸೆಲ್‌ನ ಶ್ರೀ ಗುರು ಬೂದಿಹಾಳ ಇವರು ಪಾಲ್ಗೊಂಡಿರುತ್ತಾರೆ

ಈ ಎರಡು ಸರಗಳ್ಳತನ ಪ್ರಕರಣ ಭೇಧಿಸಿರುವ ಬೆಟಗೇರಿ ಪೊಲೀಸರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments