Wednesday, May 29, 2024
Google search engine
Homeಕ್ರೈಮ್ಗದಗ : ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ !

ಗದಗ : ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ !

ಗದಗ : ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

ಏಕಾಏಕಿ 5 ದುಷ್ಕರ್ಮಿಗಳ ತಂಡವೊಂದು ಸಿನಿಮೀಯ ರೀತಿಯಲ್ಲಿ ಪ್ರಕಾಶ್ ನಿಡಗುಂದಿ ಎಂಬುವವರ ಮನೆಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಾರೆ. ಜೊತೆಗೆ ಜೀಪ್​ಗೆ ಬೆಂಕಿ ಹಚ್ಚಿ, ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಹೀಗೆ ಮಾಡಿದ ದುಷ್ಕರ್ಮಿಗಳಿಗೆ ಪ್ರಶ್ನೆ‌ ಮಾಡಿದ ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿದ್ದಾರೆ. ಈ ಘಟನೆ ಸಂಬಂಧ ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯ ಮಿಲಿಂದ್ ಕಾಳೆ, ನಾಗರಾಜ್ ಕಾಳೆ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇನ್ನು ಆರೋಪಿಗಳು ಬೈಕ್​ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments