Wednesday, May 29, 2024
Google search engine
Homeಅಪಘಾತಗದಗ : ಟಿಪ್ಪರ್ ಮತ್ತು ಪೊಲೀಸ್ ಬೈಕ್ ನಡುವೆ ಅಪಘಾತ ; ಪೊಲೀಸ್ ಪೇದೆಗೆ ಗಂಭಿರ...

ಗದಗ : ಟಿಪ್ಪರ್ ಮತ್ತು ಪೊಲೀಸ್ ಬೈಕ್ ನಡುವೆ ಅಪಘಾತ ; ಪೊಲೀಸ್ ಪೇದೆಗೆ ಗಂಭಿರ ಗಾಯ..!

ಗದಗ : ಟಿಪ್ಪರ್ ಮತ್ತು ಪೊಲೀಸ್ ಬೈಕ್ ನಡುವೆ ಅಪಘಾತವು ಗದಗದ ಬೆಟಗೇರಿ ರೈಲ್ವೇ ಅಂಡರ್ ಬ್ರಿಜ್ ಹತ್ತಿರ ಈ ಘಟನೆ ನಡೆದಿದೆ.

ಪೊಲೀಸ್ ಪೇದೆ ವೀರಯ್ಯ ಹಿರೇಮಠ (54) ಕಾಲು ಮುರಿದು ಹೋಗಿದೆ, ಮತ್ತು ಗಂಭಿರ ಗಾಯಗಳಾಗಿವೆ. ಪೇದೆ ವೀರಯ್ಯ ಬೆಟಗೇರಿಯಿಂದ ಗದಗ ಕಡೆ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಬೈಕ್‌ ನುಜ್ಜಾಗಿದೆ.

ಇತ್ತ ಅಪಘಾತ ಮಾಡಿದ ಚಾಲಕ ಟಿಪ್ಪರ್ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಗದಗ ನಗರದ ಪಂಚಾಕ್ಷರಿ ನಗರದ ಬಳಿ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾನೆ.

ಘಟನೆಯಲ್ಲಿ ಪೇದೆ ಎಡಗಾಲಿಗೆ ಗಂಭೀರ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗದಗ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments