Wednesday, May 29, 2024
Google search engine
Homeಅಂಕಣಗದಗ : ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ

ಗದಗ : ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ

ಗದಗ : ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಟ್ಟಡ ನಿರ್ಮಾಣ ಗೌಂಡಿ ಮೇಸ್ತ್ರಿಗಳ ಸಂಘ” ರಿ” ಗದಗ ಬೆಟಗೇರಿ ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಇಂದು ಪುಟ್ಟರಾಜ ಗವಾಯಿಗಳು ಆಶ್ರಮದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಕಟ್ಟಡ ನಿರ್ಮಾಣ ಗೌಂಡಿ ಮೇಸ್ತ್ರಿಗಳ ಸಂಘ” ರಿ” ಗದಗ ಬೆಟಗೇರಿ ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಡಿತ್ ಪುಟ್ಟರಾಜ ಗವಾಯಿಗಳ ಆಶ್ರಮ ತಲುಪಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಾಗೂ ಮಾಡಿದ ಶ್ರೀ ಕಲಯ್ಯಜನವರು ಸಸಿ ನೀರು ಹುಣಸೆ ಮಾತನಾಡಿದ ಹಗಲು ಇರುಳು ಎನ್ನದೆ ಕಟ್ಟಡ ಸಾಮಗ್ರಿಗಳನ್ನು ತೆಗೆದು ಕೊಂಡು ಮನೆ ನಿರ್ಮಾಣ ಮಾಡಲು ಆ ಕುಟುಂಬದ ಸುರಕ್ಷಿತವಾಗಿ ವಾಸಿಸಲು ನಿಮ್ಮ ಪರಿಶ್ರಮ ಅಪಾರ ಎಂದು ಶ್ರೀ ಕಲಯ್ಯಜನವರು ಹೇಳಿದರು.

ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಭೀಮರಾವ್ ಜಾದವ್ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.ಹಿರಿಯ ಮಹಿಳಾ ಕಾರ್ಮಿಕರಿಗೆ ವಿಶೇಷ ಸನ್ಮಾನಕಟ್ಟಡ ಗೌಂಡಿ ಮೇಸ್ತ್ರಿಗಳ ಸಂಘದ ಅಧ್ಯಕ್ಷರಾದ ಶೇಖಪ್ಪ ಮಾತನಾಡಿ ಮುಂದಿನ ದಿನಮಾನಗಳಲ್ಲಿ ಕಾರ್ಮಿಕರ ಸಿಗುವ ಸವಲತ್ತುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ.ಕಟ್ಟಡ ಕಾರ್ಮಿಕರು ಕಾರ್ಮಿಕ ಕಾರ್ಡು ಪಡೆಯಲು ಹರಸಾಹಸ ಪಡುತ್ತಿದ್ದಾರೆ.ಎಂದು ಹೇಳಿದರು

ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಭೀಮರಾವ್ ಜಾದವ್ ಮಾತಾನಾಡಿ ಎಲ್ಲ ಕಾರ್ಮಿಕರಿಗೆ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು ಕೋರಿದರು ವಿಶ್ವ ಕಾರ್ಮಿಕರ ದಿನಾಚರಣೆ ಎಂದೊಡನೆಯೇ 8 ತಾಸುಗಳ ಕೆಲಸದ ಅವಧಿಯ ಬೇಡಿಕೆಯನ್ನು ಮುಂದಿಟ್ಟು 1886 ರ ಮೇ ಒಂದರಂದು ಅಮೆರಿಕದ ಚಿಕಾಗೋದ ಇಲಿನಾಯ್ಸ್ ಪ್ರದೇಶದಲ್ಲಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ನಡೆಸಿದ ಅಭೂತಪೂರ್ವ ಹೋರಾಟವು ನೆನಪಿಗೆ ಬರುತ್ತದೆ. ಎಂದು ಹೇಳಿದರು.

ಡಾಲ್ಮಿಯಾ ಸಿಮೇಂಟ ಜನರಲ್ ಮ್ಯಾನೇಜರ್ ರಾದ ವಿಪಿನ್ ಕುಮಾರ್ ಕೈಲಾ ಮಾತನಾಡಿ ಗದಗ ಜಿಲ್ಲೆಯ ಗದಗ ಕಟ್ಟಡ ಕಾರ್ಮಿಕರ ಸಂಘವು ಅತ್ಯಂತ ಒಳ್ಳೆಯ ಸಂಘಟನೆ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಪಡೆಯಲು ಈ ಸಂಘಟನೆ ಅವಶ್ಯಕವಾಗಿದೆ.ಮತ್ತು ಕಾರ್ಮಿಕರ ಏಳಿಗೆಗೆ ಡಾಲ್ಮಿಯಾ ಸಿಮೇಂಟ್ ಕಂಪನಿ ಯಾವಾಗಲೂ ನಿಮ್ಮ ಜೊತೆ ಇರುತ್ತದೆ.ಇದರ ಜೊತೆ ಡಾಲ್ಮಿಯಾ ಸಿಮೇಂಟ್ ವತಿಯಿಂದ ಎಲ್ಲ ಕಾರ್ಮಿಕರಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದರು.

ಶಂಕರ ಬಾಕಳೆ ಮಾತನಾಡಿ ನಮ್ಮನ್ನಾಳುವ ಸರಕಾರಗಳನ್ನು ಸದಾ ಕಾಲ ವಿರೋಧಿಸಿಕೊಂಡೇ ಹೋರಾಡು ವುದು ಸಂಘಟನೆಗಳಿಗೆ ನಿಜಕ್ಕೂ ಸವಾಲಿನ ಕೆಲಸ. ಪ್ರತಿ ಯೊಂದು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೂ ಹೋರಾಟದ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ದೇಶದ ಅಭಿವೃದ್ಧಿಗೆ ಕಾರ್ಮಿಕರೂ ಕಾರಣ ಎನ್ನುವುದನ್ನು ಅರಿತುಕೊಂಡು ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ಒದಗಿಸುವ ಉದಾರತೆ ಸರಕಾರ ನಡೆಸುವವರಿಗೆ ಇರಬೇಕಾದ್ದು ಅತ್ಯಗತ್ಯವಾಗಿದೆ.

ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಶೇಖಪ್ಪ ನೀ ಕರಿಬಿಷ್ಟಿ ಹೇಳಿದರು.ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕು. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಗೀರಿ ಬಂಕಧಮನಿ, ಉಮೇಶ್ ಹುಲ್ಲನ್ನವರ, ಅರವಿಂದ ತುಡ್ವೆಕರ ,ಎಂ ಪಿ ಪಾಟೀಲ್, ಬಸವರಾಜ ಮಲ್ಲಣ್ಣವರ, ಎಂ ಐ ಹಿರೇಮನಿ, ಎಂ ಸಿ ಐಲಿ, ಎ ಪಿ ಕೊಟೆಗೌಡರ, ಎಸ್ ಎಂ ಅಂಗಡಿ ,ಶಂಕರ ಬಾಕಳೆ, ಅರವಿಂದ ಸಿಂಗ್ ಬ್ಯಾಳಿ, ಎ ಎಮ್ ನೀಲಿ,ಆಯ್ ಪಿ ಸಮಗಂಡಿ, ಸುಭಾಷ್ ಗುಗ್ಗರಿ, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಹಾಗೂ ಕಟ್ಟಡ ನಿರ್ಮಾಣ ಗೌಂಡಿ ಮೇಸ್ತ್ರಿಗಳ ಸಂಘ” ರಿ” ಗದಗ ಬೆಟಗೇರಿ ಪದಾಧಿಕಾರಿಗಳಾದ‌ ಜಂದಿಸಾಬ ಎಚ್ ಬಳ್ಳಾರಿ,ಶಿವಲಿಂಗಯ್ಯ ಅಲ್ಲಿಪುರ, ಪರಶುರಾಮ ಕಟಗಿ,ಈರಣ್ಣ ಕಣವಿ,ಬಾಬಣ್ಣ ಹಗೇದಾಳ,ಮುತ್ತಣ್ಣ ಲಕ್ಕುಂಡಿ, ಶೇಖಪ್ಪ ಕಳಸಾಪೂರ,ಶರಣಯ್ಯ ಗದಗ,ನಿಂಗಪ್ಪ ಸೋಮನಗೌಡ್ರ,ಖಾಜಾಸಾಬ ಸೊನ್ನದ,ಸೋಮಣ್ಣ ಬಂಡಿವಡ್ಡರ,ಮಲ್ಲಪ್ಪ ಹೂವಣ್ಣವರ,ಉಳಿವೆಪ್ಪ ಪಲೇದ ,ಯಂಕಪ್ಪ ತಾಳದವರ,ದುರುಗಪ್ಪ ಡೋಣಿ, ಮಹೇಶ್ ಇಟಗಿ,ಮಲ್ಲಪ್ಪ ತಳವಾರ, ಶ್ರೀಕಾಂತ್ ಬೇವಿನಕಟ್ಟಿ, ಇಸ್ಮಾಯಿಲ್ ಬೇಲೇರಿ,ಕಾಶಿಮ್ ಭಾವಿಕಟ್ಟಿ , ಹನುಮಂತಪ್ಪ  ಹಾಗೂ ಕಾರ್ಮಿಕರು,  ಸರ್ವ ಸಧ್ಯಸರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments